ಜವಾಹರ, ಠಾಣೆ

ಜವಾಹರ ಅಥವಾ ಜವ್ಹಾರ್‌ವು ಠಾಣೆ ಜಿಲ್ಲೆಯ ಒಂದು ಗಿರಿಧಾಮ. ಮುಂಬಯಿಯಿಂದ 180 ಕಿ.ಮೀ. ಹಾಗೂ ಠಾಣೆ ನಗರಕೇಂದ್ರದಿಂದ 79 ಕಿ.ಮೀ. ದೂರದಲ್ಲಿದೆ. ಇದು 10 ಮೀಟರ್‌ ಎತ್ತರದಲ್ಲಿ ನೆಲೆಸಿದೆ.

ಆಕರ್ಷಕವಾದ ಹಲವು ಜಲಪಾತಗಳನ್ನು ಒಳಗೊಂಡಿರುವ ಜವಾಹರವು, ಹಸಿರು ತರಕಾರಿ, ಹೇರಳ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಅತ್ಯಂತ ಶ್ರೀಮಂತಿಕೆ ಇಲ್ಲಿನ ಈ ಸಂಪತ್ತಿನಲ್ಲಿದೆ. ಮಹಾರಾಷ್ಟ್ರವನ್ನು ಆಳಿದ ಜನಪ್ರಿಯ ಅರಸು ಛತ್ರಪತಿ ಶಿವಾಜಿ ಮಹಾರಾಜರು ಸೂರತ್‌ ವಶಪಡಿಸಿಕೊಳ್ಳಲು ಸಾಗುವ ಮಾರ್ಗದಲ್ಲಿ ಇಲ್ಲೊಂದಿಷ್ಟು ದಿನ ಕ್ಯಾಂಪ್‌ ಹೂಡಿದ್ದ ಎಂದು ಹೇಳಲಾಗುತ್ತದೆ. ಇಲ್ಲಿನ ಆಹ್ಲಾದಮಯ ವಾತಾವರಣ, ಛಾಯಾಗ್ರಹಣ ಸ್ನೇಹಿ ಅವಕಾಶ, ಉತ್ತಮ ತಾಣಗಳು ಇಲ್ಲಿವೆ. ಇದರಿಂದ ಜವಾಹರವು ಠಾಣೆಮಹಾಬಲೇಶ್ವರ ಎಂದು ಕೂಡ ಕರೆಸಿಕೊಳ್ಳುತ್ತದೆ. ಈ ಗಿರಿಧಾಮವು ಇನ್ನೊಂದು ವಿಷಯಕ್ಕೆ ಅತ್ಯಂತ ಜನಪ್ರಿಯವಾಗಿದೆ. ಅದೇನೆಂದರೆ ವಾರಲಿ ಪೇಂಟಿಗ್‌ಗಳು. ಅತ್ಯಂತ ಆಕರ್ಷಕ, ಅಪರೂಪದ, ಜನಪ್ರಿಯ ಕಲಾ ಪ್ರಕಾರ ಇದಾಗಿದೆ. ಇದನ್ನು ಮಹಾರಾಷಸ್ಟ್ರದ ವಾರಲಿ ಆದಿವಾಸಿಗಳು ಕಂಡುಹಿಡಿದಿದ್ದಾರೆ. ಅವರ ಬಳಕೆಯಿಂದ ಇಂದು ಇದು ದೇಶವ್ಯಾಪಿ ಮಾತ್ರವಲ್ಲ ವಿಶ್ವಾದ್ಯಂತ ಜನಪ್ರಿಯತೆ ಸಾಧಿಸಿದೆ.

ಅತ್ಯಾಕರ್ಷಕ ಪ್ರಕೃತಿ ಸಂಪತ್ತು ಇಲ್ಲಿದೆ. ಕಣ್ಮನ ಸೆಳೆಯುವ ದಡಾರ ಕೊಪ್ರಾ ಜಲಪಾತ, ಪಲೂಸಾ ಜಲಪಾತ, ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯವಾದ ಭೂಪತ್‌ಗಡ್ ಕೋಟೆ, ಜೈ ವಿಲಾಸ್‌ ಪ್ಯಾಲೇಸ್‌, ಅತ್ಯಾಕರ್ಷಕ ವೀಕ್ಷಣಾ ಸ್ಥಳಗಳಾದ ಹನಿಮೂನ್‌ ಪಾಯಿಂಟ್‌, ಸನ್‌ಸೆಟ್‌ ಪಾಯಿಂಟ್‌ ಮತ್ತಿತರ ತಾಣಗಳು ಅದ್ಬುತ ಹಾಗೂ ಆಕರ್ಷಣೆಯ ಕೇಂದ್ರವಾಗಿ ಇಲ್ಲಿ ಕಂಡು ಬರುತ್ತವೆ.

Please Wait while comments are loading...