ತಿರುಮಂಗಲಕುಡಿ ಒಂದು ಹಳ್ಳಿಯಾಗಿದ್ದು, ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿದೆ. ಈ ಹಳ್ಳಿಯಲ್ಲಿರುವ ಪ್ರಾಣನಾದೇಶ್ವರರ್ ದೇವಸ್ಥಾನವು ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಮುಖ ದೇವರು ಪ್ರಾಣನಾದೇಶ್ವರರ‍್ ಮತ್ತು ಮಂಗಲಾಂಬಿಕೆ. ಸೂರಿಯಾನರ‍್ ಕೋಯಿಲ್‌ನಿಂದ ಈ ದೇವಸ್ಥಾನ ಕೇವಲ 1 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ರಾಜ ಕುಲೋತ್ತುಂಗನ ಮಂತ್ರಿ ಅಲೈವನರ್ ತನ್ನ ಪ್ರದೇಶದಲ್ಲಿ ಸಂಗ್ರಹಿಸಿದ ತೆರಿಗೆ ಹಣದಿಂದ ರಾಜನ ಅನುಮತಿಯನ್ನೂ ಪಡೆಯದೇ ಈ ದೇವಸ್ಥಾನವನ್ನು ಕಟ್ಟಿಸಿದ ಎಂದು ಹೇಳಲಾಗಿದೆ.
ಇದನ್ನು ಅರಿತ ರಾಜ, ಮಂತ್ರಿಯ ಶಿರಚ್ಛೇದನಕ್ಕೆ ಆಗ್ರಹಿಸಿದ. ಕೊನೆಯ ಆಸೆಯನ್ನು ಕೇಳಿದ ಮಂತ್ರಿ, ತನ್ನ ಅಂತ್ಯಸಂಸ್ಕಾರವನ್ನು ತಿರುಮಂಗಲಕುಡಿಯಲ್ಲೇ ಮಾಡಬೇಕೆಂದು ಕೋರಿಕೊಂಡ. ಈ ಹಿನ್ನೆಲೆಯಲ್ಲಿ ಮಂತ್ರಿಯ ದೇಹವನ್ನು ತಿರುಮಂಗಲಕುಡಿಗೆ ತರಲಾಯಿತು. ಮಂಗಲಾಂಬಿಕೆಯ ಬಳಿ ಮಂತ್ರಿಯ ಪತ್ನಿಯು ರಕ್ಷಣೆ ಬಯಸಿದಳು. ತನ್ನ ಗಂಡನಿಗೆ ಮರಳಿ ಜೀವ ತುಂಬುವಂತೆ ಆಕೆ ಕೋರಿಕೊಂಡಳು. ದೇವಿಯ ಆಶೀರ್ವಾದದಿಂದ ಮಂತ್ರಿಗೆ ಜೀವ ಬಂತು. ನಂತರ ಮಂತ್ರಿಯು ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಈ ದೇವರನ್ನು ಪ್ರಾಣನಾದೇಶ್ವರರ್ ಎಂದು ಕರೆದ. ಹೀಗಾಗಿ ಈ ಮಂಗಳಾಂಬಿಕೆಯು ಐಶ್ವರ್ಯ ಮತ್ತು ಪುನರ್‌ಜೀವನ ನೀಡಿದ ದೇವಿ ಎಂದು ಕರೆಯಲಾಯಿತು.


Click it and Unblock the Notifications