Search
  • Follow NativePlanet
Share
ಮುಖಪುಟ » ಸ್ಥಳಗಳು » ಸೊಂದಾ » ಹವಾಮಾನ

ಸೊಂದಾ ಹವಾಮಾನ

ಚಳಿಗಾಲವು  ಸೊಂದಾಕ್ಕೆ ಭೇಟಿಕೊಡಲು ಉತ್ತಮ ಕಾಲವಾಗಿದೆ. ಈ ಕಾಲದಲ್ಲಿ ಇಲ್ಲಿನ ಹವಾಮಾನ ಅದ್ಭುತವಾಗಿದ್ದು, ಸಂತೋಷಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇವರೆಗೆ): ಸೊಂದಾ ಗ್ರಾಮವು ಬೇಸಿಗೆಯಲ್ಲಿ ಅತ್ಯಂತ ಹೆಚ್ಚಿನ ಬಿಸಿಲ ಬೇಗೆಯಿಂದ ಕೂಡಿರುತ್ತದೆ.ಇಲ್ಲಿನ ಬಿಸಿಲನ್ನು ತಡೆದುಕೊಳ್ಳುವುದು ಪ್ರವಾಸಿಗರಿಗೆ ಕಠಿಣವಾಗುತ್ತದೆ. ಅಲ್ಲದೆ ಇದು ಪ್ರವಾಸಿಗರಿಗೆ ಅಸೌಕರ್ಯವನ್ನುಂಟು ಮಾಡುತ್ತದೆ.  ಈ ಬಿಸಿಲಿನಿಂದಾಗಿ ಪ್ರವಾಸಿಗರು ಮಾರ್ಚ್ ನಿಂದ ಮೇವರೆಗೆ ಸೊಂಡಕ್ಕೆ ಹೋಗುವ ಯೋಜನೆಯನ್ನು ಕೈಬಿಡುವುದು ಉತ್ತಮ. ಆಗ ಇಲ್ಲಿನ ದಿನದ ಉಷ್ಣಾಂಶ 38 ° ಸೆಲ್ಶಿಯಸ್ ಇರುತ್ತದೆ. ರಾತ್ರಿ ವೇಳೆ ಅದು 30° ಸೆಲ್ಶಿಯಸ್ ವರೆಗೆ ಕುಸಿಯುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್ ವರೆಗೆ): ಈ ಪ್ರದೇಶವು ಸಮುದ್ರಕ್ಕೆ ಅತಿ ಸಮೀಪವಿರುವುದರಿಂದ  ಮಳೆಗಾಲದಲ್ಲಿ ಇಲ್ಲಿ ಹೆಚ್ಚಿನ ಮಳೆಯಾಗುತ್ತದೆ.ಆಗ ಇಲ್ಲಿ ಸುತ್ತಾಡಲು ಮತ್ತು ಹೊರಾಂಗಣ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಮಯವು ಇಲ್ಲಿಗೆ ಭೇಟಿಕೊಡಲು ಸೂಕ್ತ ಸಮಯವಲ್ಲ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ  ಸೊಂದಾದ ವಾತಾವರಣವು ತಂಪಾಗಿ, ಆಹ್ಲಾದಕರವಾಗಿರುತ್ತದೆ.ಆಗ ಇಲ್ಲಿನ ಉಷ್ಣಾಂಶವು 20° ಯ ಒಳಗೆ ಇರುತ್ತದೆ. ಈ ಸಮಯವು ಇಲ್ಲಿಗೆ ಭೇಟಿಕೊಡಲು ಅತ್ಯಂತ ಸೂಕ್ತ ಕಾಲವಾಗಿದೆ.