ಸಿಂಹಾಚಲಕ್ಕೆ ಹೋಗಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಚಳಿಗಾಲವು ಅತ್ಯುತ್ತಮ ಅವಧಿಯಾಗಿದೆ. ಈ ಸಮಯದಲ್ಲಿ ಇಲ್ಲಿ ಚಳಿಯಿಂದ ಕೂಡಿರುವ ಚಳಿಗಾಲವಿರುವುದಿಲ್ಲ. ಆದರು ಬೆಚ್ಚಗೆ ಮುದ ನೀಡುವ ಹಿತವಾದ ವಾತಾವರಣವಿರುತ್ತದೆ. ಹಗಲಿಗೆ ಹೋಲಿಸಿದರೆ ಸಂಜೆ ಮತ್ತು ರಾತ್ರಿಗಳು ತುಂಬ ತಣ್ಣಗೆ ಇರುತ್ತವೆ. ಶಾಲು, ಮೇಲುಡುಪು ಇಲ್ಲವಾದರೆ ಅದನ್ನು ತಡೆಯುವುದು ಅಸಾಧ್ಯವಾಗುತ್ತದೆ.
ಸಿಂಹಾಚಲದಲ್ಲಿ ಬೇಸಿಗೆಯು ತುಂಬ ಬಿಸಿಲಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 40 ಡಿಗ್ರಿಯವರೆಗು ತಲುಪುತ್ತದೆ. ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳು ಇಲ್ಲಿ ಬೇಸಿಗೆಯ ತಿಂಗಳುಗಳಾಗಿರುತ್ತವೆ. ಕೆಲವೊಮ್ಮೆ ಜೂನ್ ಮಧ್ಯಭಾಗದವರೆಗು ಧಗೆಯಿರುತ್ತದೆ. ಈ ಸಮಯದಲ್ಲಿ ಸಂಜೆಗಳು ಸಹ ಬೆಚ್ಚಗೆ ಇದ್ದು, ರಾತ್ರಿಗಳು ತಂಪಾಗಿ ಇರುತ್ತವೆ. ಆದರೆ ಇದು ದಿನದ ಉಷ್ಣಾಂಶದ ಮೇಲೆ ಅವಲಂಬಿತವಾಗಿರುತ್ತದೆ.
ಮಳೆಗಾಲವು ಸಿಂಹಾಚಲದಲ್ಲಿ ಜೂನ್‍ನಿಂದ ಶುರುವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಸ್ಥಳವು ಉತ್ತಮವಾದ ಮಳೆಯನ್ನೆ ಕಾಣುತ್ತದೆ. ಕೆಲವೊಮ್ಮೆ ಅಕ್ಟೋಬರ್ ತಿಂಗಳಿನಲ್ಲು ಸಹ ಹನಿ ಮಳೆಯು ಬೀಳುತ್ತದೆ. ಈ ಕಾಲದಲ್ಲಿ ಉಷ್ಣಾಂಶವು ಸಹಿಸಲು ಸಹ್ಯವೆನಿಸುವ 33 ಡಿಗ್ರಿಯಷ್ಟು ಇಳಿಯುತ್ತದೆ. ಆದರೆ ಆರ್ದ್ರತೆಯು ಸ್ವಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಹಾಗಾಗಿ ಈ ಸಮಯವು ಇಲ್ಲಿಗೆ ಭೇಟಿ ಕೊಡಲು ಉತ್ತಮ ಕಾಲವಲ್ಲ.
ಸಿಂಹಾಚಲದಲ್ಲಿ ಚಳಿಗಾಲವು ಆಂಧ್ರ ಪ್ರದೇಶದ ಇತರ ಭಾಗಗಳಂತೆ ಹಿತವಾಗಿರುತ್ತದೆ. ಆದರು ಈ ಪ್ರಾಂತ್ಯದಲ್ಲಿ ಅಷ್ಟೊಂದು ಚಳಿಯ ಕಾಟವಿರುವುದಿಲ್ಲ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು 27 ಡಿಗ್ರಿಗಿಂತ ಮೇಲೆ ಹೋಗುವುದಿಲ್ಲ. ಇಲ್ಲಿ ಚಳಿಗಾಲವು ನವೆಂಬರ್ ಅಂತ್ಯ ಭಾಗದಲ್ಲಿ ಶುರುವಾಗಿ, ಫೆಬ್ರವರಿ ಮಧ್ಯ ಭಾಗದವರೆಗು ಇರುತ್ತದೆ.