ವಿಶಾಖ ಪಟ್ಟಣ ವಿಮಾನ ನಿಲ್ದಾಣವು ಸಿಂಹಾಚಲಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದನ್ನು ವೈಜಾಗ್ ವಿಮಾನ ನಿಲ್ದಾಣ ಎಂದು ಸಹ ಕರೆಯುತ್ತಾರೆ. ಹೈದರಾಬಾದ್, ದೆಹಲಿ, ಮುಂಬಯಿ, ಕೊಲ್ಕೊತ್ತಾ, ತಿರುವನಂತಪುರಂ ಮತ್ತು ಚೆನ್ನೈ ಗಳಂತಹ ದೇಶದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ವಿಮಾನಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಈ ವಿಮಾನ ನಿಲ್ದಾಣವು ಸಿಂಹಾಚಲದಿಂದ 16 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ನೀವು ಸಿಂಹಾಚಲಕ್ಕೆ ಕ್ಯಾಬ್‍ಗಳನ್ನು ಬಾಡಿಗೆಗೆ ಪಡೆದು ತಲುಪಬಹುದು. ಅವುಗಳ ಬಾಡಿಗೆ ವೆಚ್ಚ 500 ರೂಪಾಯಿ ಆಗುತ್ತದೆ.