ಸಮಾಧಿ ಮಂದಿರ ಶಿರಡಿಯಲ್ಲಿ ನೆಲೆಗೊಂಡಿರುವ ಮತ್ತೊಂದು ತಾಣವಾಗಿದೆ. ಕಥೆಯ ಪ್ರಕಾರ, ನಾಗ್ಪುರದ ಓರ್ವ ಲಾಕ್ಷಾಧಿಪತಿ ಈ ಸಮಾಧಿ ಮಂದಿರದ ಒಡೆತನವನ್ನು ಹೊಂದಿದ್ದನು. ಅವರು ಸಾಯಿಬಾಬಾರ ಓರ್ವ ನಿಷ್ಠಾವಂತ ಭಕ್ತನಾಗಿದ್ದನಲ್ಲದೆ ದೇವಾಲಯದಲ್ಲಿ ಒಂದು ಮುರಳೀಧರ ಮೂರ್ತಿಯನ್ನು ಅನುಸ್ಥಾಪಿಸಲು ಆಶಿಸಿದನು. ದಂತ ಕಥೆಯ ಪ್ರಕಾರ ಬಾಬಾರವರೆ ಮುರಳೀಧರರಾದರು ಮತ್ತು ದೇವಸ್ಥಾನವು ಸಮಾಧಿ ಮಂದಿರವಾಯಿತು ಎಂಬುದು ನಂಬಿಕೆ.
ದಿವಂಗತ ಬಾಲಾಜಿ ವಸಂತ್ ರವರು 1954 ರಲ್ಲಿ, ಇಟಾಲಿಯನ್ ಅಮೃತಶಿಲೆ ಬಳಸಿ ಸಾಯಿ ಬಾಬಾರ ಆರಾಧ್ಯ ಮೂರ್ತಿಯನ್ನು ಮಾಡಿಸಿದರು. ದೇವಾಲಯ ಮುಂಜಾನೆ 5 ರಿಂದ ಪ್ರಾರ್ಥನೆಗಳೊಂದಿಗೆ ತೆರೆದು ರಾತ್ರಿ 10 ಗಂಟೆಗೆ ಪ್ರಾರ್ಥನೆಗಳೊಂದಿಗೆ ಮುಚ್ಚಲಾಗುತ್ತದೆ.


Click it and Unblock the Notifications