ಶಿರಡಿ - ಮನ್ಮಾಡ್ ರಾಜ್ಯ ಹೆದ್ದಾರಿಯಲ್ಲಿರುವ ಲೆಂದಿ ಬಾಗ್ ಒಂದು ಸುಂದರವಾಗಿ ಅಲಂಕೃತವಾಗಿರುವ ಉದ್ಯಾನವನವಾಗಿದೆ. ಈ ಹೂದೋಟದಲ್ಲಿ ಸಾಯಿಬಾಬಾರವರು ಸಾಕಷ್ಟು ಸಮಯ ಕಳೆದಿದ್ದರು ಎಂದು ನಂಬಲಾಗಿದೆ.
ಪ್ರಸಿದ್ಧ ಜಾನಪದ ಮಾತಿನ ಪ್ರಕಾರ, ಲೆಂದಿಬಾಗ್ ನಿಂದ ಒಂದು ಕಲ್ಲನ್ನು ಶಿರಡಿಯ ಗ್ರಾಮಸ್ಥರು ತೆಗೆದುಕೊಂಡು ಬಂದು ಅದನ್ನು ಬಟ್ಟೆ ಒಗೆಯುವುದಕ್ಕಾಗಿ ಉಪಯೋಗಿಸುತ್ತಿದ್ದರು, ಹಿಗಿರುವಾಗ ಒಂದು ದಿನ ಅದರ ಮೇಲೆ ಬಾಬಾ ಕುಳಿತಿದ್ದನ್ನು ಕಂಡ ನಂತರ ಆ ಕಲ್ಲನ್ನು ದ್ವಾರಕಾಮಾಯಿ ಗೆ ಕೊಂಡೊಯ್ದು ಅದನ್ನು ಪವಿತ್ರವೆಂದು ಭಾವಿಸಲು ತೊಡಗಿದರು.
ಲೆಂದಿಬಾಗ್ ನಲ್ಲಿ ಅಖಂಡದೀಪ ಎಂದರೆ ಸದಾ ಬೆಳಗುವ ದೀಪವಿದ್ದು, ಇದು ಎಂಥವರು ನೋಡಲೇಬೇಕಾದ ವಿಸ್ಮಯ. ಇದು ಬಾಬಾರವರು ತಾವೇ ಬೆಳಗಿಸಿದ್ದು, ಒಂದು ವಂಗೆಯ ಮರದ ಕೆಳಗೆ ಬೆಳಗುತ್ತಿರುತ್ತದೆ. ಈ ಉದ್ಯಾನವನವೂ 24 ಘಂಟೆಗಳೂ ಸಂದರ್ಶಕರಿಗೆ ಮುಕ್ತವಾಗಿರುತ್ತದೆ.


Click it and Unblock the Notifications