ಶಿರಡಿಯ ಸಮಾಧಿ ಮಂದಿರದ ಪ್ರವೇಶದಲ್ಲಿ ನೆಲೆಸಿರುವ ದ್ವಾರಕಾಮಾಯಿ ಒಂದು ಮಸೀದಿಯಾಗಿದೆ. ಸಾಯಿ ಬಾಬರವರು ತಮ್ಮ ಕೊನೆಗಾಲದವರೆಗೂ ಈ ಸ್ಥಳದಲ್ಲೇ ಉಳಿದಿದ್ದರು.
ದ್ವಾರಕಾಮಾಯಿ ಎರಡು ಹಂತಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲ ಹಂತವು ಬಾಬರವರ ಬೃಹತ್ತಾದ ಚಿತ್ರ ಮತ್ತು ಅವರು ಕೂರುತ್ತಿದ್ದ ದೊಡ್ಡ ಕಲ್ಲನ್ನು ಹೊಂದಿದೆ. ಈ ಹಂತವು ಮತ್ತೂ ಎರಡು ಕೊಠಡಿಗಳಾಗಿ ಭಾಗಿಸಲ್ಪಟ್ಟಿದ್ದು ಒಂದರಲ್ಲಿ ಅವರ ರಥ ಮತ್ತೊಂದರಲ್ಲಿ ಅವರ ಪಾಲ್ಖಿ ಗಳ ನೆಲೆಯಾಗಿವೆ. ಎರಡನೇ ಹಂತದಲ್ಲಿ ಬಾಬಾ ರವರು ಸ್ನಾನ ಮಾಡುವಾಗ ಕೂರುತ್ತಿದ್ದ ಒಂದು ಚೌಕಾಕಾರದ ಕಲ್ಲಿನ ಕುರ್ಸಿಯನ್ನು ಹೊಂದಿದೆ.
ಪ್ರವಾಸಿಗರನ್ನು ಮತ್ತು ಭಕ್ತಾದಿಗಳನ್ನು ಆಕರ್ಷಿಸುವ ವರ್ಣ ಚಿತ್ರಗಳು ಆ ಸ್ಥಳದ ತುಂಬೆಲ್ಲಾ ಅಲಂಕೃತಗೊಂಡಿವೆ.


Click it and Unblock the Notifications