Search
  • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ಹವಾಮಾನ

ಸತನಾ ಹವಾಮಾನ

ಸತನಾ ಕ್ಕೆ ಪ್ರವಾಸ ಬರಲು ಚಳಿಗಾಲ ಉತ್ತಮ ಕಾಲ.ಅಕ್ಟೋಬರ್ ನಿಂದ ಮಾರ್ಚ್ ಆಹ್ಲಾದಕರ ವಾತಾವರಣವಿರುವುದರಿಂದ ಈ ಸಮಯ ಉತ್ತಮ ಕಾಲ ಎನ್ನಬಹುದಾಗಿದೆ. 

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ಇಲ್ಲಿ ಬೇಸಿಗೆ ಎನ್ನಬಹುದು. ಏಪ್ರಿಲ್ ಮತ್ತು ಮೇ ಯಲ್ಲಿ 40 ಡಿಗ್ರಿ ಸೆಲ್ಸಿಯಸ್ ನಷ್ಟು  ಉಷ್ಣಾಂಶ ಏರುತ್ತದೆ. ಆದ್ದರಿಂದ ಈ ಸಮಯದಲ್ಲಿ ಇಲ್ಲಿ ಬರುವುದು ಅಷ್ಟೊಂದು ಸಮಂಜಸವಲ್ಲ.

ಮಳೆಗಾಲ

ಸತನಾದಲ್ಲಿ ಜೂನ್ ನಿಂದ ಸೆಪ್ಟೆಂಬರ್ ಮಳೆಗಾಲ. ಉಳಿದ ಮಧ್ಯಪ್ರದೇಶದ ಭಾಗಗಳಂತೆ ಇಲ್ಲಿ ಕೂಡ ಮಳೆಗಾಲ ಅರಬ್ಬೀ ಸಮುದ್ರದ ಮಾನ್ಸೂನ್‍ಗಳಿಂದ ಬರುತ್ತದೆ. ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಇಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಆದ್ದರಿಂದ ಈ ಸಮಯದಲ್ಲಿ ಇಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ.

ಚಳಿಗಾಲ

ಅಕ್ಟೋಬರ್ ನಲ್ಲಿ ಪ್ರಾರಂಭಿಸಿ ನವೆಂಬರ್ ಮತ್ತು ಫೆಬ್ರವರಿಯ ವರೆಗೆ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ತಾಪಮಾನವು 5 ಡಿಗ್ರಿ ಸೆಲ್ಶಿಯಸ್‍ಗೆ ಇಳಿಯುತ್ತದೆ. ಇದು ಈ ಪ್ರದೇಶಕ್ಕೆ ಪ್ರವಾಸ ಬರಲು ಉತ್ತಮ ಕಾಲ.