ಇದು ಬುದ್ಧ ನಾಲ್ಕು ಧರ್ಮದ ಚಕ್ರಗಳು, ಉದಾತ್ತ ಸತ್ಯಗಳು ಮತ್ತು ಎಂಟು ಮಾರ್ಗಗಳನ್ನು ತಿಳಿಸಿದ ಜಾಗವಾದ ಸಾರನಾಥದಲ್ಲಿ ಇದೆ. ಸಾರನಾಥ ಬುದ್ಧ ಬೇರೂರಿ ಏಳಿಗೆ ಹೊಂದಿ ವಿಶ್ವದ ಉಳಿದ ಭಾಗಗಳಿಗೆ ಹಬ್ಬಿದ ಪ್ರದೇಶವಾಗಿದೆ. ಸಾರನಾಥವು ವಿಶ್ವದ ಇತರ ಭಾಗಗಳಾದ ಟಿಬೆಟ್ ,ಚೀನಾ, ಜಪಾನ್ ಥೈಲ್ಯಾಂಡ್ ಮುಂತಾದ ಕಡೆಗಳಿಂದ ಬೌದ್ಧ ವಿದ್ವಾಂಸರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಳ್ಳಿಯಲ್ಲಿ ಬೇರೆ ದೇಶದ ಯಾತ್ರಿಕರು ಕೂಡ ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಒಂದು ಕಾಗ್ಯು ಟಿಬೆಟಿಯನ್ ಮಠ ಅಥವಾ ವಜ್ರ ವಿಧ್ಯಾ ಸಂಸ್ಥೆ. ಇದು ಜಿಂಕೆ ಉದ್ಯಾನವನದ ಹತ್ತಿರದಲ್ಲಿದೆ.
ಸಾರನಾಥದ ಕಾಗ್ಯು ಧಾರ್ಮಿಕ ಮಠ ದೊಡ್ಡದಾಗಿದ್ದು ಬೋಧ ಗಯಾದ ನಳಂದಾ ಸಂಸ್ಥೆ ಮಾದರಿಯಲ್ಲಿ ಕಟ್ಟಲಾಗಿದೆ. ಪ್ರಸ್ತುತ ಇಲ್ಲಿ 15 ಸನ್ಯಾಸಿಗಳು ಮತ್ತು 4 ಸನ್ಯಾಸಿನಿಯರು ಅಧ್ಯಯನ ಮಾಡುತ್ತಿದ್ದಾರೆ.


Click it and Unblock the Notifications