ಕರ್ಪೊ-ಖಾರ್ ಸಮಾಧಿಯು ಜಮ್ಮು- ಕಾಶ್ಮೀರದಲ್ಲಿರುವ ಸಂಕೂನ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಧಾರ್ಮಿಕ ಕೇಂದ್ರವು ಕರ್ಪೊ - ಖಾರ್ ಗ್ರಾಮದಲ್ಲಿ ನೆಲೆಗೊಂಡಿದೆ. ಇಲ್ಲಿರುವ ಸಯದ್ ಮೀರ್ ಹಶಿಮ್‍ರವರ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಭಕ್ತಾಧಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಇವರು...
ಕರ್ಟ್ಸೆ ಕಣಿವೆಯು ಕಾರ್ಗಿಲ್‍ನಲ್ಲಿ ನೆಲೆಸಿದ್ದು, ಸುರು ನದಿಯ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಣಿವೆಯು ಪೂರ್ವಾಭಿಮುಖವಾಗಿ ಹಬ್ಬಿರುವ ಪರ್ವತ ಶ್ರೇಣಿಗಳ ಕಡೆಗೆ ಸಾಗುತ್ತದೆ. ಇದರಲ್ಲಿ ಇಂದಿಗೂ ಹೊರಗಿನ ಸಂಪರ್ಕ ಸಾಧ್ಯವಿಲ್ಲದ ಹಲವು ಹಳ್ಳಿಗಳು ನೆಲೆಸಿವೆ ಎಂದು ಭಾವಿಸಲಾಗಿದೆ. ಅವುಗಳಲ್ಲಿ ಕರ್ಟ್ಸೆ -...
ಕರ್ಟ್ಸೆ ನದಿಯು, ಸುರು ನದಿಯ ಉಪನದಿಯಾಗಿದೆ. ಇದು ಕಾರ್ಗಿಲ್ ಜಿಲ್ಲೆಯ ಗುಂಟ ಹರಿಯುತ್ತದೆ. ಕರ್ಟ್ಸೆ ನದಿಯ ದಂಡೆಯ ಮೇಲೆ ಕರ್ಟ್ಸೆ-ಖಾರ್ ಗ್ರಾಮವು ನೆಲೆಗೊಂಡಿದೆ. ರಂಗ್ಡುಮ್ ಪಾಸ್‍ನಿಂದ ಹುಟ್ಟುವ ಕರ್ಟ್ಸೆ ನದಿಯು ಪೂರ್ವಕ್ಕೆ ಹರಿದು ಕರ್ಟ್ಸೆ ಕಣಿವೆಯನ್ನು ಹುಟ್ಟು ಹಾಕುತ್ತದೆ.
ನಾಕ್‍ಪೊಚು ಎಂಬುದು ಸುರು ನದಿಯ ಮೂಲಗಳಲ್ಲಿ ಒಂದಾಗಿದ್ದು, ಪಶ್ಚಿಮಾಭಿಮುಖವಾಗಿ ಹರಿಯುತ್ತದೆ.