ಸನಸರ್ ನಲ್ಲಿರುವ ಶಂಖಪಾಲ ದೇವಸ್ಥಾನ ಒಂದು ಪ್ರಮುಖ ಪ್ರವಾಸಿ ತಾಣ. ಇದು ಸಮುದ್ರಮಟ್ಟದಿಂದ 2800 ಮೀ. ಎತ್ತರದಲ್ಲಿ ನೆಲೆಸಿದೆ ಶಂಖಪಾಲ ರೀಡ್ಜ್ (ಪರ್ವತಶ್ರೇಣಿ)ನಲ್ಲಿ ಸ್ಥಿತವಿರುವ ಈ ದೇವಸ್ಥಾನವನ್ನು ಐದು ಘಂಟೆಗಳ ಚಾರಣದ ಮೂಲಕ ತಲುಪಬಹುದು. 400 ವರ್ಷ ಪುರಾತನವಾದ ಈ ದೇವಾಲಯದಲ್ಲಿ ಪೂಜಿಸಲ್ಪಡುವೆ ದೇವತೆ ನಾಗ ಶಂಖ ಪಾಲ....
ಶಂಖ ಪಾಲ್ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿರುವ ಸುರ್ನಿ ಕುಂಡ್ ಒಂದು ಚಿಕ್ಕ ಕೊಳ. ಇದು ಶಂಖ ಪಾಲ್ ಪರ್ವತ ಶ್ರೇಣಿಯಲ್ಲಿ ನೆಲೆಸಿದ್ದು, ಸನಸರ್ ನಿಂದ ಏಳು ಘಂಟೆಗಳ ಚಾರಣದ ಮೂಲಕ ಇದನ್ನು ತಲುಪಬಹುದಾಗಿದೆ.
ಶಾಂತಾ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಈ ತಾಣವು ಪ್ರಕೃತಿಯ ವಿಹಂಗಮ ನೋಟಗಳನ್ನು ಒದಗಿಸುವ ಅದ್ಭುತ ಸ್ಥಳವಾಗಿದೆ. ಇಲ್ಲಿ ಪಾಂಚಾರಿ ಕಣಿವೆಯ ಸುಂದರವಾದ ದೃಶ್ಯಾವಳಿಗಳನ್ನು ಕಾಣಬಹುದು. ಈ ಕಣಿವೆಯು ಶಾಂತಾ ಶ್ರೇಣಿಯ ಆ ಬದಿಯಲ್ಲಿ ಸ್ಥಿತವಾಗಿದೆ. ಶಾಂತಾ ಗಾಲ ಪಾಸ್ ಮಾರ್ಗವು ಪ್ರವಾಸಿಗರನ್ನು ಲ್ಯಾಂಡರ್ ಪ್ರದೇಶಕ್ಕೆ...
ಸ್ಥಳೀಯವಾಗಿ ಲಾಡೂ ಅಂದರೆ ಹುಡುಗ ಹಾಗು ಲಾಡಿ ಅಂದರೆ ಹುಡುಗಿ ಎಂಬರ್ಥ ಕೊಡುವ ಈ ತಾಣವು 4 ಕಿ.ಮೀ ಉದ್ದದ ಚಾರಣ ಮಾರ್ಗವಾಗಿದ್ದು, ಮಾಧಾ ಟಾಪ್ ನಿಂದ ಪ್ರಾರಂಭಗೊಳ್ಳುತ್ತದೆ. ಇದು ನೈಸರ್ಗಿಕ ಚಾರಣಕ್ಕೆ ಹೆಸರುವಾಸಿಯಾದ ತಾಣವಾಗಿದೆ.
ಟ್ರೆಕ್ಕಿಂಗ್ ಗೆ ಆದರ್ಶಪ್ರಾಯವಾದ ಪ್ರದೇಶ ಇದಾಗಿರುವುದರಿಂದ, ಪ್ರವಾಸಿಗರಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ಟ್ರೆಕ್ಕಿಂಗ್ ಕೈಪಿಡಿಯು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಲಭ್ಯವಿದ್ದು, ಪ್ರವಾಸಿಗರು ಬೇಕಾದರೆ ಪಡೆಯಬಹುದು. ಸನಸರ್ ನಲ್ಲಿ ಪ್ರವಾಸಿಗರು ಸಂಘಟಿತ ಹಾಗು ರಚನಾತ್ಮಕ ಟ್ರೆಕ್ಕಿಂಗ್...