ರಾಂಚಿಯಲ್ಲಿ ಬಿರ್ಸ ಮುಂಡ ದೇಶೀಯ ವಿಮಾನ ನಿಲ್ದಾಣವಿದೆ. ಇಲ್ಲಿಗೆ ಪಾಟ್ನ, ದೆಹಲಿ, ಮುಂಬಯಿ ಮತ್ತು ಕೋಲ್ಕೋಟಾಗಳಿಂದ ವಿಮಾನಗಳು ಬಂದು ಹೋಗುತ್ತಿರುತ್ತವೆ. ಈ ನಿಲ್ದಾಣವು ನಗರದ ಕೇಂದ್ರ ಭಾಗದಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಇಲ್ಲಿ ಹೊಚ್ಚ ಹೊಸದಾದ ಕಸ್ಟಮ್ಸ್ ಮತ್ತು ಇಮ್ಮಿಗ್ರೇಶನ್ ಸೌಲಭ್ಯ ಹೊಂದಿರುವ ಇಂಟಿಗ್ರೇಟೇಡ್ ಟರ್ಮಿನಲ್, ಡ್ಯೂಟೀ ಫ್ರೀ ಅಂಗಡಿಗಳು, ಟ್ರಾವೆಲ್ ಡೆಸ್ಕ್ ಗಳು ಮತ್ತು ಲಾಂಜ್‍ಗಳ ಸೌಲಭ್ಯವಿದೆ. ಇದನ್ನು ಮಾರ್ಚ್ 24 2013ರಂದು ಲೋಕಾರ್ಪಣೆ ಮಾಡಲಾಯಿತು. ಏರ್ ಇಂಡಿಯಾ, ಗೋ ಏರ್ ಮತ್ತು ಜೆಟ್ ಏರ್ ವೇಸ್ ವಿಮಾನಗಳು ಇಲ್ಲಿಂದ ಪ್ರತಿನಿತ್ಯ ದೇಶದ ಇತರ ಭಾಗಗಳಿಗೆ ಹಾರಾಟ ನಡೆಸುತ್ತವೆ.