ವರ್ಷವಿಡಿ ಇಲ್ಲಿನ ತಾಪಮಾನ ಹಿತವಾಗಿಯೆ ಇರುತ್ತದೆ. ಆದಾಗ್ಯೂ ಪ್ರವಾಸಿಗರು ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ ಎಂಬ ಸಲಹೆ ನೀಡಬಹುದು. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 20 ಡಿಗ್ರಿಯಿಂದ 32 ಡಿಗ್ರಿ ಸೆಲ್ಶಿಯಸ್ ಇದ್ದು ಹಿತವಾದ ವಾತಾವರಣ ಹೊಂದಿರುತ್ತದೆ.
(ಏಪ್ರಿಲ್ ನಿಂದ ಜೂನ್) : ಪ್ರಾಗ್ಫೂರ್ ನಗರದಲ್ಲಿ ಬೇಸಿಗೆ ಕಾಲವು ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ಇರುತ್ತದೆ. ಈ ಸಮಯದಲ್ಲಿ ಕನಿಷ್ಠ 20 ಹಾಗೂ ಗರಿಷ್ಠ 32 ಡಿಗ್ರಿ ಸೆಲ್ಶಿಯಸ್ ತಾಪಮಾನವಿರುತ್ತದೆ. ಈ ಕಾಲದಲ್ಲಿ ಹಿತವಾದ ವಾತಾವರಣ ಇರುವುದರಿಂದ ಪ್ರವಾಸಿಗರು ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ.
(ಜುಲೈ ನಿಂದ ಸೆಪ್ಟೆಂಬರ್) : ಪ್ರಾಗ್ಫೂರ್ ನಗರದಲ್ಲಿ ಮಳೆಗಾಲವು ಜುಲೈ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಕಾಲದಲ್ಲಿ ಹೆಚ್ಚು ಮಳೆ ಬೀಳುತ್ತದೆ ಆದ್ದರಿಂದ ಮಳೆಗಾಲದಲ್ಲಿ ಭೇಟಿ ನೀಡಲು ಬಯಸುವ ಪ್ರವಾಸಿಗರು ಬೇಕಾಗುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡರೆ ಉತ್ತಮ. ಮಳೆಗಾಲದಲ್ಲೂ ಇಲ್ಲಿ ತಾಪಮಾನ ಅನುಕೂಲಕರವಾಗಿಯೇ ಇರುವುದರಿಂದ ಪ್ರವಾಸಿಗರು ಭೇಟಿ ನೀಡಬಹುದು.
(ಅಕ್ಟೋಬರ್ ನಿಂದ ಫೆಬ್ರವರಿ) : ಚಳಿಗಾಲವು ಈ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಫೆಬ್ರವರಿ ವರೆಗೂ ಇರುತ್ತದೆ. ಇಲ್ಲಿನ ಇತರ ಪ್ರದೇಶಗಳಂತೆ ಇಲ್ಲಿ ಚಳಿಗಾಲದಲ್ಲಿ ತಾಪಮಾನ ಕಡಿಮೆ ಆಗುವುದಿಲ್ಲ. ಕನಿಷ್ಠ 16 ಡಿಗ್ರಿ ಹಾಗೂ ಗರಿಷ್ಠ 25 ಡಿಗ್ರಿ ಸೆಲ್ಶಿಯಸ್ ಇರುತ್ತದೆ.