Search
 • Follow NativePlanet
Share
ಮುಖಪುಟ » ಸ್ಥಳಗಳು» ಪ್ರಭಾಸಗಿರಿ

ಪ್ರಭಾಸ್ ಗಿರಿ : ಜೈನ ಸಮುದಾಯದ ಪವಿತ್ರ ಕ್ಷೇತ್ರ

5

ಪ್ರಭಾಸ್ ಗಿರಿ ಪಟ್ಟಣ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿದೆ, ಇದು ಅಲಹಾಬಾದಿನಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ಜೈನ ಸಮುದಾಯದವರಿಗೆ ಪವಿತ್ರ ಸ್ಥಳವಾಗಿದ್ದು ವರ್ಷಾದ್ಯಂತ ಆ ಸಮುದಾಯದವರನ್ನು ಆಕರ್ಷಿಸುತ್ತದೆ. ಇಲ್ಲಿ ಜೈನ ಸಮುದಾಯದವರಿಗೆ ಅತಿ ಹೆಚ್ಚಿನ ಆಕರ್ಷಣೆಯೆಂದರೆ ಭಗವಾನ್ ಪದ್ಮ ಪ್ರಭು ದೇವಾಲಯ. ಇದನ್ನು ಭಗವಾನ್ ಪದ್ಮ ಪ್ರಭು ಹೆಸರಿನಲ್ಲಿ ನಿರ್ಮಿಸಲಾಗಿದೆ, ಇವರು ಆರನೇ ಜೈನ ತೀರ್ಥಂಕರರು. ಪ್ರಭಾಸ್ ಗಿರಿ ಹಿಂದೂ ಸಮದಾಯದವರಿಗೂ ಅತ್ಯಂತ ಪವಿತ್ರ ಸ್ಥಳ.

ಶ್ರೀಕೃಷ್ಣ ಪರಮಾತ್ಮನು ಭೂಮಿಯ ಮೇಲಿನ ತನ್ನ ಕೊನೆಯ ದಿನಗಳನ್ನು ಇಲ್ಲೇ ಕಳೆದದ್ದು ಎನ್ನುವುದು ನಂಬಿಕೆ. ಈ ಪಟ್ಟಣದಲ್ಲಿ ಹಲವು ಗುಹೆಗಳಿವೆ, ಈ ಗುಹೆಗಳ ಗೋಡೆಯಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿದ್ದು ಇದರಿಂದಾಗಿ ಈ ಗುಹೆಯ ಇತಿಹಾಸ ತಿಳಿದುಕೊಳ್ಳಲು ಭಾರೀ ಕುತೂಹಲ ಮೂಡುತ್ತದೆ.

ಪ್ರವಾಸಿಗರು ಪ್ರಭಾಸ್ ಗಿರಿಗೆ ಭೇಟಿ ನೀಡುವ ಸಮಯದಲ್ಲಿ ಕರಾ ಮತ್ತು ಮಂಜಾನಪುರ ಸ್ಥಳವನ್ನೂ ಇದರೊಂದಿಗೆ ಬೆರೆತು ನೋಡಬಹುದಾಗಿದೆ. ಕರಾ ಹಲವು ಹಿಂದೂ ದೇವಾಲಯಗಳ ತವರುಮನೆ. ಪ್ರಮುಖವಾಗಿ ಶೀತ್ಲಾ ಮಾತಾ ದೇವಾಲಯ, ಚಿತ್ರಪಾಲ್ ಭೈರವ್ ದೇವಾಲಯ, ಹನುಮಾನ್ ದೇವಾಲಯ ಮತ್ತು ಕಾಳೇಶ್ವರ ಮಹಾದೇವ ದೇವಾಲಯ ಪ್ರಮುಖವಾದದ್ದು. ಶೀತ್ಲಾ ಮಾತಾ ದೇವಾಲಯ ಗಂಗಾನದಿಯ ತಟದಲ್ಲಿದೆ, ಈ ದೇವಾಲಯವನ್ನು ದೇವಿಯ 51 ಶಕ್ತಿಪೀಠಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಮಂಜಾನಪುರ ಕೂಡಾ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದಾಗಿದ್ದು ಇಲ್ಲಿ ಕಾಮಾಶೀನ್ ದೇವಿ ದೇವಾಲಯವಿದ್ದು ಪ್ರಮುಖ ಆಕರ್ಷಣೆಯಾಗಿದೆ.

ವಾತಾವರಣ

ಪ್ರಭಾಸ್ ಗಿರಿ ಉತ್ತರ ಪ್ರದೇಶದ ಇತರ ನಗರಗಳಂತೆಯೇ, ಮೂರೂ ಪ್ರಮುಖ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲದ ವಾತಾವರಣಕ್ಕೆ ಸಾಕ್ಷಿಯಾಗುತ್ತದೆ.

ಪ್ರಭಾಸ್ ಗಿರಿಗೆ ಭೇಟಿ ನೀಡಲು ಯಾವ ಸಮಯ ಸೂಕ್ತ

ಧಾರ್ಮಿಕ ಕೇಂದ್ರವಾಗಿರುವುದುರಿಂದ ಪ್ರಭಾಸ್ ಗಿರಿ ಭಕ್ತಾದಿಗಳನ್ನು ವರ್ಷಾದ್ಯಂತ ಆಕರ್ಷಿಸುತ್ತದೆ. ಆದಾಗ್ಯೂ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಪ್ರಸಕ್ತ ಸಮಯ. ಯಾಕೆಂದರೆ ಈ ಅವಧಿಯಲ್ಲಿ ಆಹ್ಲಾದಕರವಾಗಿರುತ್ತದೆ.

ಪ್ರಭಾಸಗಿರಿ ಪ್ರಸಿದ್ಧವಾಗಿದೆ

ಪ್ರಭಾಸಗಿರಿ ಹವಾಮಾನ

ಪ್ರಭಾಸಗಿರಿ
35oC / 94oF
 • Sunny
 • Wind: W 13 km/h

ಉತ್ತಮ ಸಮಯ ಪ್ರಭಾಸಗಿರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪ್ರಭಾಸಗಿರಿ

 • ರಸ್ತೆಯ ಮೂಲಕ
  ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಪ್ರಭಾಸ್ ಗಿರಿಗೆ ಹೇರಳವಾಗಿದೆ. ಸೋಮನಾಥ್ ಮತ್ತು ವಾರಣಾಸಿಯಿಂದ ಪ್ರಭಾಸ್ ಗಿರಿಗೆ ಹೆಚ್ಚಿನ ಬಸ್ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಭರ್ವಾರಿ, ಪ್ರಭಾಸ್ ಗಿರಿಯಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದ್ದು ಇದು ಹತ್ತಿರದ ರೈಲು ನಿಲ್ದಾಣ. ಇದಲ್ಲದೇ ಉತ್ತರ ಪ್ರದೇಶದ ಪ್ರಮುಖ ನಗರಗಳಿಂದ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಇಲ್ಲಿಗೆ ತಲುಪಬಹುದು. ಇನ್ನೊಂದು ಆಯ್ಕೆಯೆಂದರೆ ದೇಶದ ಇತರ ಭಾಗಗಳಿಂದ ಉತ್ತಮ ರೈಲು ಸಂಪರ್ಕವಿರುವ ಅಲಹಾಬಾದ್ ಮೂಲಕ ಇಲ್ಲಿಗೆ ತಲುಪಬಹುದು. ಅಲಹಾಬಾದಿಗೆ ಮುಂಬೈ, ಪುಣೆ, ವಾರಣಾಸಿ, ಝಾನ್ಸಿ, ಗ್ವಾಲಿಯರ್ ಮತ್ತು ನಾಗ್ಪುರದಿಂದ ಉತ್ತಮ ರೈಲು ಸಂಪರ್ಕವಿದೆ. ಅಲಹಾಬಾದಿನಿಂದ ಸಾರ್ವಜನಿಕ ಬಸ್ಸುಗಳ ಮೂಲಕ ಮತ್ತು ಟ್ಯಾಕ್ಸಿ ಮೂಲಕ ಪ್ರಭಾಸಿ ಗಿರಿ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನ ನಿಲ್ದಾಣವೆಂದರೆ ಬಾಮ್ರುಲಿ (ಅಲಹಾಬಾದ್) ವಿಮಾನನಿಲ್ದಾಣ, ಇದು ಪ್ರಭಾಸಿ ಗಿರಿಯಿಂದ 48 ಕಿಲೋಮೀಟರ್ ದೂರದಲ್ಲಿದೆ. ಬಾಮ್ರುಲಿಯಿಂದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಮೂಲಕ ಅಥವಾ ಟ್ಯಾಕ್ಸಿ ಮೂಲಕ ಪ್ರಭಾಸ್ ಗಿರಿ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Prabhas Giri
  35 OC
  94 OF
  UV Index: 9
  Sunny
 • Tomorrow
  Prabhas Giri
  29 OC
  85 OF
  UV Index: 9
  Sunny
 • Day After
  Prabhas Giri
  31 OC
  88 OF
  UV Index: 9
  Sunny