ಅಕ್ಟೋಬರ್ ತಿಂಗಳಿಂದ ನವೆಂಬರ್ ನಡುವಿನ ಅವಧಿ ಇಲ್ಲಿಯ ಭೇಟಿಗೆ ಸಕಾಲ. ಬೇಸಿಗೆ ಸೂಕ್ತ. ಚಳಿಗಾಲದಲ್ಲಿ ಅಪಾರ ಚಳಿ ಇರುತ್ತದೆ. ಚಳಿಗಾಲದಲ್ಲಿ ಬಹುತೇಕ ಸಂದರ್ಭ ಹಿಮ ಸುರಿಯುತ್ತಿರುತ್ತದೆ. ಇದರಿಂದ ಭೇಟಿಗೆ ಬೇಸಿಗೆ ಉತ್ತಮವಾದುದು. ಹೋರಗೆ ಸುತ್ತಾಡಲು ಇದು ಪ್ರಶಸ್ತವಾಗಿರುತ್ತದೆ.
(ಏಪ್ರಿಲ್ನಿಂದ ಜೂನ್): ಬೇಸಿಗೆಯಲ್ಲಿ ಶುಷ್ಕ ಹವಾಮಾನ ಪೂಂಚ್ನಲ್ಲಿ ಇರುತ್ತದೆ. ಅತಿಹೆಚ್ಚು ತಾಪಮಾನ ಅಂದರೆ 32 ಡಿಗ್ರಿ ಸೆಲ್ಶಿಯಸ್ ಹಾಗೂ ಕಡಿಮೆ ತಾಪಮಾನ ಅಂದರೆ 10 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತದೆ. ಪ್ರವಾಸಿಗರ ಭೇಟಿಗೆ ಇದು ಸಕಾಲ ಎಂದು ಸೂಚಿಸಲಾಗುತ್ತದೆ. ಕಾರಣ ವಾತಾವರಣ ಈ ಸಂದರ್ಭದಲ್ಲಿ ಸಹನೀಯವಾಗಿರುತ್ತದೆ.
(ಜುಲೈನಿಂದ ಸೆಪ್ಟೆಂಬರ್): ಮಳೆಗಾಲದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತದೆ. ಈ ಸಮಯದಲ್ಲಿ ವಾತಾವರಣ ಕೂಡ ಅಸಹನೀಯವಾಗಿರುತ್ತದೆ. ಒಟ್ಟಾರೆ ಪ್ರದೇಶದಲ್ಲಿ ಹಸಿರು ವ್ಯಾಪಕವಾಗಿ ಕಂಗೊಳಿಸುತ್ತಿರುತ್ತದೆ.
(ಡಿಸೆಂಬರ್ನಿಂದ ಫೆಬ್ರವರಿ): ಪೂಂಚ್ ಸಾಮಾನ್ಯವಾಗಿ ಹೆಚ್ಚು ಚಳಿಯನ್ನು ಹೊಂದಿದ ತಾಣ. ಈ ಕಾಲದಲ್ಲಂತೂ ಚಳಿಯ ಪ್ರಭಾವ ಹೆಚ್ಚಿರುತ್ತದೆ. ಈ ಸಮಯದಲ್ಲಿ ಪ್ರದೇಶದಲ್ಲಿ ಹಿಮಕೂಡ ವ್ಯಾಪಕವಾಗಿ ಸುರಿಯುತ್ತದೆ.