Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಪುಗಾರ್ » ಹವಾಮಾನ

ಪೂಂಪುಗಾರ್ ಹವಾಮಾನ

ಚಳಿಗಾಲದಲ್ಲಿ ಪೂಂಪುಗಾರ್ ಗೆ ಭೇಟಿ ನೀಡುವುದು ಉತ್ತಮ. ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇರುತ್ತದೆ. ಈ ಸಮಯದಲ್ಲಿ ಉಷ್ಣತೆ ಮಂದವಾಗಿದ್ದು ಯಾತ್ರಿಕರಿಗೆ ಒಳ್ಳೆಯ ವಾತಾವರಣವಿರುತ್ತದೆ. 

ಬೇಸಿಗೆಗಾಲ

ಪೂಂಪುಗಾರ್ ನಲ್ಲಿ ಬೇಸಿಗೆ ತುಂಬಾ ಶೈತ್ಯ ಹಾಗೂ ಸೆಖೆಯಿಂದ ಕೂಡಿರುತ್ತದೆ. ರಾತ್ರಿ ಹೊತ್ತಲ್ಲಿ ಸಮುದ್ರದಿಂದ ಬೀಸುವ ಗಾಳಿಗೆ ಹವಾಮಾನ ತಂಪಾಗುತ್ತದೆ ಆದರೂ ಹಗಲಿನಲ್ಲಿ ಉಷ್ಣತೆ ಕನಿಷ್ಠ 34 ಡಿಗ್ರಿಯಿಂದ ಗರಿಷ್ಠ 40 ಡಿಗ್ರಿ ವರೆಗೆ ಇರುತ್ತದೆ. ಬೇಸಿಗೆ ಕಾಲವು ಮಾರ್ಚ್ ನಿಂದ ಮೇ ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ.

ಮಳೆಗಾಲ

ಇಲ್ಲಿ ಮಳೆಗಾಲವು ಭಾರಿ ಮಳೆಯಿಂದ ಕೂಡಿದ್ದು ವಾತಾವರಣವು ಸ್ವಲ್ಪ ತಂಪಾಗಿರುತ್ತದೆ. ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆಗಾಲವಿದ್ದು, ಇಲ್ಲಿ ನೈಋತ್ಯ ಮಾರುತದ ಮಳೆ ಕಡಿಮೆಯಾಗಿದ್ದು ಅಕ್ಟೋಬರ್ ನಲ್ಲಿ ಈಶಾನ್ಯ ಮಾರುತದ ಮಳೆ ಜೋರಾಗಿ ಸುರಿಯುತ್ತದೆ. ಸುಳಿಗಾಳಿ ಬರುವ ಸಾಧ್ಯತೆ ಹೆಚ್ಚಾದ ಕಾರಣ, ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದು ಉತ್ತಮ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇರುವ ಚಳಿಗಾಲದಲ್ಲಿ ಇಲ್ಲಿನ ಉಷ್ಣತೆ 24 ಹಾಗೂ 32 ಡಿಗ್ರಿ ಸೆಲ್ಶಿಯಸ್ ಮಧ್ಯದಲ್ಲಿರುತ್ತದೆ.