Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ನನಿ » ಹವಾಮಾನ

ಪೊನ್ನನಿ ಹವಾಮಾನ

ಉಷ್ಣವಲಯದ ಹವಾಗುಣ ಹೊಂದಿರುವ ಪೊನ್ನನಿ ಎಲ್ಲಾ ಋತುಗಳ ಪ್ರವಾಸಿ ತಾಣವಾಗಿದೆ. ಆದರೆ ಭಾರೀ ಮಾನ್ಸೂನ್ ಮತ್ತು ತೀವ್ರ ಬೇಸಿಗೆ ತಿಂಗಳು ಪೊನ್ನನಿಯ ಭೇಟಿಗೆ ಯೊಗ್ಯವಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್ (ಓಣಂ ಉತ್ಸವದ ಋತು) ಬೋಟ್ ರೇಸ್ ವೀಕ್ಷಿಸಬಹುದಾಗಿದ್ದು, ನವೆಂಬರ್ ನಿಂದ ಫೆಬ್ರವರಿ ತನಕ ಉತ್ತಮ ಹವಾಗುಣ ಹೊಂದಿರುತ್ತದೆಯಾದ್ದರಿಂದ ಋತುವು ಪ್ರವಾಸಕ್ಕೆ ಉತ್ತಮ ಕಾಲವಾಗಿದೆ. 

ಬೇಸಿಗೆಗಾಲ

ಇತರ ದಕ್ಷಿಣ ಭಾರತೀಯ ಪಟ್ಟಣಗಳಂತೆ ಪೊನ್ನನಿಯೂ ಉಷ್ಣವಲಯದ ಹವಾಮಾನವನ್ನು ಹೊಂದಿದ್ದು ಬೇಸಿಗೆಯಲ್ಲಿ ತಾಪಮಾನ 32 ° C ರಿಂದ 38 ° C ವರೆಗೂ ಇರುತ್ತದೆ. ಮಾರ್ಚ್ ತಿಂಗಳಿಂದ ಪ್ರಾರಂಭವಾಗಿ ಮೇ ಕೊನೇ ವಾರದ ವರೆಗೆ ಮುಂದುವರೆಯುತ್ತದೆ. ಪ್ರಯಾಣಕ್ಕೆ ಹತ್ತಿ ಬಟ್ಟೆಗಳನ್ನು ಬಳಸುವುದು ಸೂಕ್ತ.

ಮಳೆಗಾಲ

ಪೊನ್ನನಿ ಕೇರಳದ ಇತರ ಕರಾವಳಿ ಪ್ರದೇಶಗಳಲ್ಲಿನ ಹವಾಮಾನವನ್ನೇ ಹೋಲುತ್ತದೆ. ಜೂನ್ ತಿಂಗಳಿನಿಂದ ಶುರುವಾಗುವ ಮಳೆ ಸೆಪ್ಟೆಂಬರ್ ತಿಂಗಳವರೆಗೆ ಮುಂದುವರೆಯುತ್ತದೆ. ನಿಲ್ಲದ ಭಾರೀ ಮಳೆ ಈ ಋತುವಿನಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು.

ಚಳಿಗಾಲ

ಚಳಿಗಾಲವು ಪೊನ್ನನಿ ಭೇಟಿಗೆ  ಉತ್ತಮ ಕಾಲ. ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಮುಂದುವರೆದಿದ್ದು, ತಾಪಮಾನವು 24 ° ಸಿ  ನಿಂದ 32 ° ಸಿ ಇರುತ್ತದೆ. ಈ ಋತುವಿನ ವತಾವರಣವು ಸೌಮ್ಯ ಹಾಗೂ ಆಹ್ಲಾದಕರವಾಗಿದ್ದು ಪ್ರವಾಸಕ್ಕೆ ಉತ್ತಮ ಕಾಲವಾಗಿದೆ.