ಪಂಚಕುಲದಲ್ಲಿ ಉಪೋಷ್ಣವಲಯದ ಹವಾಮಾನವಿರುತ್ತದೆ. ಇಲ್ಲಿ ಬೇಸಿಗೆಗಳು ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಚಳಿಗಾಲಗಳು ತಂಪಾಗಿ ಮತ್ತು ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಅಕ್ಟೋಬರ್-ನವಂಬರ್ ಪಂಚಕುಲಕ್ಕೆ ಭೇಟಿ ನೀಡಲು ಉತ್ತಮ ಸಮಯ.
ಮಾರ್ಚ್-ಮೇ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣತೆಯು 47 ಡಿಗ್ರಿಯಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಪ್ರಯಾಣಕ್ಕೆ ಅನುಕೂಲಕರವಾಗಿರುವುದಿಲ್ಲ.
ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಉಷ್ಣತೆಯು ಮಳೆಗಾಲದ ನಂತರ ಕಡಿಮೆಯಾಗುತ್ತದೆ. ಧಗೆ ಮಾತ್ರ ಜೂನ್ನಿಂದ ಸೆಪ್ಟಂಬರ್ ಕೊನೆವರೆಗೆ ಇರುತ್ತದೆ.
ಡಿಸಂಬರ್-ಜನವರಿ ಚಳಿಗಾಲ. ಈ ಸಮಯದಲ್ಲಿ ಹಿಮ ಬೀಳಬಹುದು. ಪಶ್ಚಿಮದ ಹವಾಮಾನ ವೈಪರಿತ್ಯಗಳು ಚಳಿಗಾಲದ ಮಳೆಗೆ ಕಾರಣವಾಗುತ್ತದೆ.