ಪಾಲಿಗೆ ಭೇಟಿ ಕೊಡಲು ಅತ್ಯುತ್ತಮ ಅವಧಿಯೆಂದರೆ ಅಕ್ಟೋಬರ್ ನಿಂದ ಫೆಬ್ರವರಿ ಅಂತ್ಯದ ನಡುವಿನ ಅವಧಿ. ಆಗ ಇಲ್ಲಿನ ಸ್ಥಳಗಳ ವೀಕ್ಷಣೆ ಮಾಡಲು ಹವಾಮಾನ ಪ್ರಶಸ್ತವಾಗಿರುತ್ತದೆ.
(ಮಾರ್ಚ್ ನಿಂದ ಜೂನ್): ಇಲ್ಲಿ ಬೇಸಿಗೆ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ಅಂತ್ಯದವರೆಗು ಇರುತ್ತದೆ. ಆಗ ಇಲ್ಲಿನ ಗರಿಷ್ಟ ಮತ್ತು ಕನಿಷ್ಟ ಉಷ್ಣಾಂಶಗಳು ಕ್ರಮವಾಗಿ 46° ಯಿಂದ 36°ಸೆಲ್ಶಿಯಸ್ ವರೆಗು ಇರುತ್ತದೆ. ಈ ಋತುವು ಅತ್ಯಂತ ಸುಡುವ ಮತ್ತು ಅಧಿಕ ಉಷ್ಣಾಂಶದ ಸಲುವಾಗಿ ಇಲ್ಲಿಗೆ ಭೇಟಿ ಕೊಡಲು ಅಸಹನೀಯವೆನಿಸುತ್ತದೆ.
(ಜೂನ್ ನಿಂದ ಸೆಪ್ಟಂಬರ್): ಇಲ್ಲಿ ಮಳೆಗಾಲವು ಜೂನ್ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟಂಬರ್ ನಲ್ಲಿ ಅಂತ್ಯವಾಗುತ್ತದೆ. ಈ ಪ್ರಾಂತ್ಯವು ಮಳೆಗಾಲದಲ್ಲಿ ಅಗತ್ಯ ಪ್ರಮಾಣದಷ್ಟು ಮಳೆಯನ್ನು ಪಡೆಯುತ್ತದೆ.
(ಅಕ್ಟೋಬರ್ ನಿಂದ ಫೆಬ್ರವರಿ): ಈ ಪ್ರಾಂತ್ಯವು ಚಳಿಗಾಲದಲ್ಲಿ ಅತ್ಯಂತ ಕನಿಷ್ಟ ಉಷ್ಣಾಂಶವನ್ನು ಹೊಂದಿರುತ್ತದೆ. ಆಗ ಇಲ್ಲಿನ ಗರಿಷ್ಟ ಮತ್ತು ಉಷ್ಣಾಂಶವು ಕ್ರಮವಾಗಿ 26° ಯಿಂದ 5° ಸೆಲ್ಶಿಯಸ್ ವರೆಗು ಇರುತ್ತದೆ.