ಊಟಿಯಲ್ಲಿ ಯಾವುದೇ ರೀತಿಯ ವಿಮಾನ ನಿಲ್ದಾಣವಿಲ್ಲ. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದರ ಜೊತೆಗೆ ಇತ್ತೀಚೆಗೆ ಕೊಯಮತ್ತೂರಿನಿಂದ ಊಟಿಗೆ ಪ್ರತಿದಿನವು ಹೆಲಿಕಾಪ್ಟರ್ ಹಾರಾಟದ ಸೇವೆಯನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಜೆ.ಬಿ ಏವಿಯೇಷನ್ ಸಂಸ್ಥೆಯು ಈ ಮಹತ್ವದ ಯೋಜನೆಯನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಬೆಲ್ 407 ಹೆಲಿಕಾಪ್ಟರುಗಳನ್ನು ಬಳಸಲಾಗುತ್ತದೆ.