Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆ ಗೋವಾ » ಆಕರ್ಷಣೆಗಳು » ಸಂತ ಕಾಜೇತನ್ ಚರ್ಚ್

ಸಂತ ಕಾಜೇತನ್ ಚರ್ಚ್, ಹಳೆ ಗೋವಾ

1

ಸಂತ ಕಾಜೇತನ್ ಚರ್ಚ್, ಇಡೀ ಗೋವಾದಲ್ಲೇ ಇರಬಹುದಾದ ಅತಿ ಸುಂದರವಾದ ಚರ್ಚ್ ಎಂದರೆ ತಪ್ಪಾಗಲಿಕ್ಕಿಲ್ಲ. ಯುರೋಪಿಯನ್ ದೇಶಗಳಲ್ಲಿರುವ ಚರ್ಚ್ ಗಳ ತದ್ ರೂಪವನ್ನು ಹೋಲುವಂತಹ ಈ ಚರ್ಚ್ ಕಾರಿಂಥಿಯನ್ ಮತ್ತು ಗೋಥ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ತನ್ನ ಪರಿಶುದ್ಧವಾದ ಶ್ವೇತ ವರ್ಣದಿಂದ ಹಿಡಿದು, ಮುಂಭಾಗದ ಎರಡೂ ಬದಿಗಿರುವ ಆಯತಾಕಾರದ ಗೋಪುರಗಳು ಯುರೋಪಿಯನ್ ವಾಸ್ತು ಶೈಲಿಯನ್ನು ನೆನಪಿಸುತ್ತದೆ. ಇಟಲಿಯ ಸೇಂಟ್ ಪೀಟರ್ ಚರ್ಚ್ ನ್ನು ಗುರಿಯಾಗಿರಿಸಿಕೊಂಡು ರಚಿಸಲಾಗಿರುವ ಈ ಚರ್ಚ್ ಲ್ಯಾಟರೈಟ್ ಕಲ್ಲುಗಳನ್ನು ಹೊಂದಿದೆ. ಒಬ್ಬ ಪರಿಣಿತ ಪ್ರಯಾಣಿಕ ಅಥವಾ ಯಾತ್ರಿಕ, ರಷ್ಯಾದ ಚರ್ಚ್ ಗಳಾದ ಫಾರ್ಟ್ರೆಸ್ಸ್ ಪೌಲ್, ಪೀಟರ್ ಮತ್ತು ಗೋವಾದ ಸಂತ ಕಾಜೇತನ್ ಚರ್ಚ್ ಗಳ ನಡುವಿರುವ ವಾಸ್ತುಶಿಲ್ಪದ ಅವಿನಾಭಾವ ಸಂಬಂಧವನ್ನು ಸರಾಗವಾಗಿ ಹೋಲಿಸಬಲ್ಲ.   

ಚರ್ಚ್ ಒಳಾಂಗಣ

ಈ ಚರ್ಚ್ ಬೃಹತ್ತಾದ ಒಳಾಂಗಣವನ್ನು ಹೊಂದಿದೆ. ಕಾರಿಂಥಿಯನ್ ಮತ್ತು ಬರೋಕ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿರುವ ಕೆಲವು ಅಲ್ಟರ್ ಗಳು ಚರ್ಚ್ ನ ಎಡ ಹಾಗು ಬಲ ಬದಿಗಳೆರಡರಲ್ಲೂ ಇರುವುದನ್ನು ಕಾಣಬಹುದು. ಎಡ ಬದಿಗಿರುವ ಅಲ್ಟರ್ ಗಳು ಪೂಜ್ಯರಾದ 'ಅವರ್ ಲೇಡಿ ಆಫ್ ಪೀಯ್ಟಿ' ಮತ್ತು 'ಸಂತ ಕ್ಲೇರ್'ಗೆ ಸಮರ್ಪಿತವಾಗಿದೆ. ಬಲಬದಿಗಿರುವ ಅಲ್ಟರ್ ಗಳು ಸಂತ ಕಾಜೇತನ್, ಸಂತ ಜಾನ್ ಮತ್ತು ಸಂತ ಆಗ್ನೇಸ್ ಗೆ ಮುಡುಪಾಗಿದೆ. ಇದರಲ್ಲೂ ಸಂತ ಕಾಜೇತನ್ ಗೆ ಸಮರ್ಪಿತವಾಗಿರುವ ಅಲ್ಟರ್ ದೊಡ್ಡದಾಗಿದ್ದು ಕಟ್ಟಿಗೆಯ ಪೊಡಿಯಮ್ ನಿಂದ ಸಿಂಗರಿಸಲ್ಪಟ್ಟಿದೆ. ಅಲ್ಟರ್ ಗಳಲ್ಲಿರುವ ಇಟಾಲಿಯನ್ ಶೈಲಿಯ ಪೇಂಟಿಂಗ್ ಗಳು ಸಂತ ಕಾಜೇತನ್ ನ ಜೀವನ ಕಾಲವನ್ನು ವ್ಯಕ್ತಪಡಿಸುತ್ತವೆ. ಇಲ್ಲಿರುವ ಬೃಹತ್ತಾದ ಡೋಮ್ ಹೊರಗಿನಿಂದಲೂ ಮತ್ತು ಒಳಗಿನಿಂದಲೂ ಅತ್ಯದ್ಭುತವಾಗಿ ಗೋಚರಿಸುತ್ತದೆ.

ಚರ್ಚ್ ಒಳಗಿರುವ ಬಾವಿ

ಈ ಚರ್ಚ್ ಆವರಣದೊಳಗೆ ಬಾವಿಯೊಂದಿದ್ದು, ಇತಿಹಾಸಕಾರರ ಮತ್ತು ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, ಇದು ಬಹುಶಃ ಇಲ್ಲಿದ್ದಿರಬಹುದಾದಂತಹ ಹಿಂದು ದೇವಸ್ಥಾನದ ಉಪಸ್ಥಿತಿಯ ಕುರುಹಾಗಿದೆ. ನಂತರ ಪೋರ್ಚುಗೀಸರು ಈ ಪ್ರದೇಶವನ್ನು ಆಕ್ರಮಿಸಿದ ತರುವಾಯ ಇದು ಕಳೆದು ಹೋಗಿರಬಹುದೆಂದು ಭಾವಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಇತಿಹಾಸಕಾರರ ಮತ್ತೊಂದು ಗುಂಪಿನ ಅನಿಸಿಕೆ ಪ್ರಕಾರ, ಈ ಕಟ್ಟಡಕ್ಕೆ ಸ್ಥಿರತೆಯನ್ನು ಒದಗಿಸುವ ಉದ್ದೇಶವಾಗಿ ಈ ಬಾವಿಯ ನಿರ್ಮಾಣ ಮಾಡಲಾಗಿದೆ. ಆದರೆ, ಬಸಾಲ್ಟ್ ದ್ವಾರ ಹಾದಿಯಲ್ಲಿ ಉಪಸ್ಥಿತವಿರುವ ಹಿಂದು ದೇವತೆಗಳ ಕೆತ್ತನೆಯು ಈ ಒಟ್ಟಾರೆ ವಿಚಾರವನ್ನು ಮತ್ತಷ್ಟು ವಿವಾದಕ್ಕೀಡುಮಾಡಿದೆ. ಇದೊಂದೇ ಆಗಿನ ಕಾಲದ ರಾಜನಾಗಿದ್ದ ಆದಿಲ್ ಶಾಹನ ಅರಮನೆಯ ಅಳಿದುಳಿದ ಭಾಗವಾಗಿದೆ.

ಇಲ್ಲಿಗೆ ತಲುಪುವ ಬಗೆ...

ಹಳೆ ಗೋವಾದಲ್ಲಿರುವ ಸಂತ ಕಾಜೇತನ್ ಚರ್ಚ್ ರಾಜಧಾನಿಯಾದ ಪಣಜಿಯಿಂದ 10 ಕಿ.ಮೀ ದೂರದಲ್ಲಿದೆ. ಇದರ ಸುತ್ತಮುತ್ತಲಿರುವ ಇನ್ನೆರಡು ಚರ್ಚ್ ಗಳೆಂದರೆ ಬೆಸಿಲಿಕಾ ಆಫ್ ಬಾಮ್ ಜಿಸಸ್ ಮತ್ತು ಸಂತ ಅಗಸ್ಟೀನ್. ಇನ್ನೊಂದು ವಿಚಾರವೆಂದರೆ, ಸಾಮಾನ್ಯವಾಗಿ ಉತ್ತರ ಗೋವಾದಿಂದ ಈ ಭಾಗವು ಸ್ವಲ್ಪ ದೂರವಿರುವುದರಿಂದ, ಒಂದು ದಿನವನ್ನು ಇದಕ್ಕೆಂದೇ ಮೀಸಲಾಗಿಟ್ಟು, ಇಲ್ಲಿರುವ ಬಹುತೇಕ ಚರ್ಚ್ ಗಳನ್ನು ವಿಕ್ಷೀಸಬಹುದು. ವಾಸ್ಕೊ, ಮಾರ್ಗೊ ಮುಂತಾದ ಗೋವಾದ ಎಲ್ಲ ಭಾಗಗಳಿಂದ ಕ್ಯಾಬ್ ಸೇವೆಗಳು ಇಲ್ಲಿಗೆ ಲಭ್ಯವಿದೆ. ಇಷ್ಟವಿದ್ದಲ್ಲಿ ಬೈಕ್ ಮುಖಾಂತರವೂ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City