Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆ ಗೋವಾ » ಆಕರ್ಷಣೆಗಳು » ಬೆಸಿಲಿಕಾ ಆಫ್ ಬಾಮ್ ಜೀಸಸ್

ಬೆಸಿಲಿಕಾ ಆಫ್ ಬಾಮ್ ಜೀಸಸ್, ಹಳೆ ಗೋವಾ

5

ಜಗತ್ತಿನಾದ್ಯಂತ ಸಾವಿರಾರು ಕ್ಯಾಥೋಲಿಕ್ ಮತ್ತು ನಾನಕ್ಯಾಥೋಲಿಕ್ ಕ್ರೈಸ್ತ ಭಕ್ತರನ್ನು ಆಕರ್ಷಿಸುತ್ತಿರುವ ಈ ಪವಿತ್ರ ಚರ್ಚವು ಒಂದೊಮ್ಮೆ, ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರವೇಶಕ್ಕೆ ಕಾರಣನಾದ ಸಂತ ಫ್ರಾನ್ಸಿಸ್ ಕ್ಸೇವಿಯರನ ಮನೆಯಾಗಿತ್ತು. ಸಂತ ಫ್ರಾನ್ಸಿಸ್ ಕ್ಸೇವಿಯರನ ಹತ್ತಿರ ಅತ್ಯದ್ಭುತವಾದ ಗುಣಪಡಿಸುವ ಶಕ್ತಿಯಿತ್ತೆಂದು ಎಂದು ನಂಬಲಾಗಿದ್ದು ಇಂದಿಗೂ ಕೂಡ ಅವರ ದೇಹದಲ್ಲಿ ಇದು ಪ್ರತಿಫಲಿಸುತ್ತಲಿದೆ. ಇದಕ್ಕೆ ಸಾಕ್ಷಿಯಾಗಿ ಪ್ರತಿ 10 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಅವರ ನಿರ್ಜೀವ ದೇಹದ ದರ್ಶನ. ಕಳೆದ ಬಾರಿ 2004 ರಲ್ಲಿ ಇದನ್ನು ಏರ್ಪಡಿಸಲಾಗಿತ್ತು. ಬಾಮ್ ಜೀಸಸ ಅನ್ನು ಒಳ್ಳೆಯ ಜೀಸಸ್ ಅಥವಾ ಮಗುವಾಗಿರುವ ಜೀಸಸ್ ಎಂದು ಅರ್ಥೈಸಲಾಗಿದ್ದು, ಅವರಿಗಾಗೆ ಇದು ಸಮರ್ಪಿತವಾಗಿದೆ.

ಇತಿಹಾಸ

ಭಕ್ತರಿಗಾಗಿ ಪ್ರತಿದಿನ ತೆರೆದಿರುವ  400 ವರ್ಷಗಳಷ್ಟು ಹಳೆಯದಾದ ಈ ಚರ್ಚ, ಫಾದರ್ ಅಲೆಕ್ಸೊ ಡಿ ಮೆನೆಜೆಸ್ ರಿಂದ 1605 ರಲ್ಲಿ ಉದ್ಘಾಟಿಸಲ್ಪಟ್ಟಿತು. ಚರ್ಚಿನ ಒಳಗಡೆ ಸಂತ ಫ್ರಾನ್ಸಿಸ್ ಕ್ಸೇವಿಯರನ ಜೀವನ ಶೈಲಿ ಮತ್ತು ಕಥೆಯನ್ನು ವ್ಯಕ್ತ ಪಡಿಸುವಂತಹ ಹಲವಾರು ಕಲಾಕೃತಿಗಳಿರುವುದನ್ನು ಕಾಣಬಹುದು. ಸಂತ ಫ್ರಾನ್ಸಿಸ್ ಕ್ಸೇವಿಯರನ ಕಳೆಬರವನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಸಮಾಧಿಯ ಬಹುತೇಕ ಭಾಗವನ್ನು 17 ನೇ ಶತಮಾನದ ಶಿಲ್ಪಗಾರನಾದ ಗೀಯೊವನ್ನಿ ಬಟ್ಟಿಸ್ಟಾ ಫೊಗ್ಗಿನಿ ಅವನಿಂದ ವಿನ್ಯಾಸಿಸಲ್ಪಟ್ಟಿದೆ. ಇಡಿ ಚರ್ಚನ್ನು ಜೀಸುಯಟ್ ವಾಸ್ತು ಕಲೆಯಲ್ಲಿ ನಿರ್ಮಿಸಲಾಗಿದೆ.ಸದ್ಯದಲ್ಲೆ ಇಡಿ ಚರ್ಚನ್ನು ಹಸಿರಿನ ಗ್ಯಾಲವನೈಸಡ್ ಮೇಲ್ಛಾವಣಿಯಿಂದ ಸಿಂಗರಿಸಿ ಉತ್ಕೃಷ್ಟಮಟ್ಟದ ಅನುಭವವನ್ನು ಭಕ್ತರಿಗೆ ಒದಗಿಸಲಾಗುವುದೆಂಬ ಮಾತಿದೆ. ಈ ಬೆಳವಣಿಗೆಯು ಖಚಿತವಾದಲ್ಲಿ ಇದು ಭಾರತದಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ತಂದ ಮೊಟ್ಟಮೊದಲ ಬದಲಾವಣೆಯಾಗಲಿದೆ.

ಬಹುವಾಗಿ ವಿರೋಧಿಸಲ್ಪಟ್ಟ ಅಧಿಕಾರದ ಮನೆ

ಈ ಮನೆಯು ಚರ್ಚಿನ ಆವರಣದೊಳಗೆ ಇದ್ದು ತನ್ನದೆ ಆದ ಬೇರೊಂದು ಕಟ್ಟಡವನ್ನು ಹೊಂದಿದೆ. ಇದರ ನಿರ್ಮಾಣ 1585 ರಲ್ಲಿ ಆಗಿದೆ. ಜೆಸುಯಟ್ ಮಿಷನರಿಗಳು ತಮ್ಮ ಅಂದಿನ ದೂರದ ಪೂರ್ವ ಭಾಗದ ಕಾರ್ಯಾಚರಣೆಯ ನಿಮಿತ್ತವಾಗಿ ಇದನ್ನು ಬೇಸ್ ಕ್ಯಾಂಪ ಮಾಡಿಕೊಂಡಿದ್ದರು. ಈ ಮಿಷನರಿಗಳಿಗೆ ಸ್ಥಳೀಯ ಸೆನೇಟನಿಂದ ಅತಿಯಾದ ವಿರೋಧ ವ್ಯಕ್ತವಾದುದರಿಂದ ಅವರಿಗೆ ಚರ್ಚ ನಿರ್ಮಾಣ ಮಾಡಲು ಅನುಮತಿ ಸಿಗಲಿಲ್ಲ. ಇದರಿಂದ ರೋಸಿ ಹೋದ ಅವರು ಒಂದು ರಾತ್ರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಜೀಸಸ್ ಎಂದು ಅಕ್ಷರ ಕೆತ್ತಿ, ಸಾಮಾನ್ಯ ಜನರಿಗೆ ಅಲ್ಲಿ 'ಮಾಸ್' ಆಚರಿಸಲು ಅನುವು ಮಾಡಿಕೊಟ್ಟರು. ಅಂದಿನಿಂದ ಇಲ್ಲಿ ಚಟುವಟಿಕೆಗಳು ಪ್ರಾರಂಭವಾಗಿ, ಸೆನೇಟ ಏನು ಮಾಡಲಾಗದೆ ಅಸಹಾಯಕವಾಯಿತು. ಈಗಲೂ ಕೂಡ ಅತಿಯಾಗಿ ಭೇಟಿ ನೀಡಲ್ಪಡುವ ಈ ಕಟ್ಟಡವು ಪ್ರವಾಸಿಗರ ನಡುವೆ ಹೆಸರುವಾಸಿಯಾಗಿದೆ.

ಇಲ್ಲಿ ತಲುಪುವುದು ಹೇಗೆ?

ಬೆಸಿಲಿಕಾ ಆಫ್ ಬಾಮ್ ಜೀಸಸ್ ಚರ್ಚವು ಗೋವಾದ ರಾಜಧಾನಿಯಾದ ಪಣಜಿಗೆ ಅತಿ ಸನಿಹದಲ್ಲಿದೆ. ಇಲ್ಲಿಂದ ಕ್ಯಾಬ ಮುಖಾಂತರ ಸರಳವಾಗಿ ತಲುಪಬಹುದು ಅಥವಾ ವಾಸ್ಕೊ ಡಾ ಗಾಮಾ ಇಲ್ಲವೆ ಮರಗೋವಾ ನಗರದಿಂದ ಇತರೆ ಸಾರಿಗೆ ವ್ಯವಸ್ಥೆಯ ಮೂಲಕವು ತಲುಪಬಹುದಾಗಿದೆ. ಇನ್ನು ಬಾಗಾ, ಕಲಂಗುಟ ಮತ್ತು ಕ್ಯಾಂಡೋಲಿಮನಲ್ಲಿರುವವರು ಕ್ಯಾಬಗಳ ಸಹಾಯದಿಂದ ಸುತ್ತಾಡಬಹುದಾದರೂ, ಸ್ವಂತವಾಗಿ ವಾಹನದಿಂದ ಓಡಾಡುವುದು ಉತ್ತಮವಾದ ಅಯ್ಕೆಯಾಗಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City