ನಾಗ್ಪುರದಲ್ಲಿ ಉಷ್ಣಾಂಶ ವಾತಾವರಣ ಮತ್ತು ಒಣ ವಾತಾವರಣವನ್ನು ಹೊಂದಿರುತ್ತದೆ. ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರ ವಾತಾವರಣವನ್ನು ಇದು ಹೋಲುತ್ತದೆ. ಮಹಾರಾಷ್ಟ್ರದ ಒಳಭಾಗದಲ್ಲಿರುವ ಈ ನಾಗ್ಪುರವು ವರ್ಷದ ಬಹುತೇಕ ದಿನಗಳಲ್ಲಿ ಒಣ ವಾತಾವರಣ ಇರುತ್ತದೆ. ಈ ನಗರವನ್ನು ಪ್ರವಾಸ ಮಾಡುವುದಕ್ಕೆ ಚಳಿಗಾಲ ಉತ್ತಮವಾದ ವಾತಾವರಣ.
ನಾಗ್ಪುರದ ವಾತಾವರಣವು ಅತಿಯಾದ ಉಷ್ಣತೆಯಿಂದ ಕೂಡಿದೆ. ಮಾರ್ಚ್ನಿಂದ ಜೂನ್ ತನಕ ವಾತಾವರಣವು ಸುಮಾರು 49°C ಇರುತ್ತದೆ. ಮೇ ತಿಂಗಳು ಅತಿಯಾದ ಉಷ್ಣತೆಯಿರುತ್ತದೆ ಮತ್ತು ಈ ತಿಂಗಳಲ್ಲಿ ಪ್ರವಾಸ ಕೈಗೊಳ್ಳುವುದನ್ನು ಸಲಹೆ ಮಾಡಲಾಗುವುದಿಲ್ಲ.
ಮಾನ್ಸೂನ್ಗೆ ಅನುಗುಣವಾಗಿ ಜುಲೈ ನಿಂದ ಸಪ್ಟೆಂಬರ್ ತನಕ ಮಳೆಗಾಲವು ಇರುತ್ತದೆ. ಪ್ರತಿ ವರ್ಷ ಸುಮಾರು ಮಧ್ಯಮದಿಂದ ಗರಿಷ್ಟ ಮಳೆಯ ತನಕ ಇಲ್ಲಿ ಮಳೆಗಾಲವನ್ನು ಕಾಣಬಹುದು.
ನವೆಂಬರಿನಿಂದ ಜನವರಿಯ ತನಕ ಚಳಿಗಾಲವಿರುತ್ತದೆ. ಕನಿಷ್ಟ 10 °C ಉಷ್ಣಾಂಶದಿಂದ ಆರಂಭವಾಗುವ ಈ ಪ್ರದೇಶ ಶಾಂತವಾಗಿರುತ್ತದೆ ಮತ್ತು ಇಲ್ಲಿಗೆ ಭೇಟಿ ನೀಡುವವರಿಗೆ ಸೂಕ್ತವಾದ ಕಾಲ.