Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಯತ್ತೂರ್ » ಹವಾಮಾನ

ಮಲಯತ್ತೂರ್ ಹವಾಮಾನ

ಅತಿಯಾದ ಉಷ್ಣತೆ ಮತ್ತು ತೇವವಿಲ್ಲದ ವಾತಾವರಣದಿಂದಾಗಿ ಬೇಸಿಗೆ ಕಾಲದಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ದುಸ್ಸಾಧ್ಯ. ಜೂನ್ಮತ್ತು ಜುಲೈನಲ್ಲಿ ಅತ್ಯಂತ ಮಳೆ. ಹೀಗಾಗಿ ಮಳೆಗಾಲವೂ ಕೂಡಾ ಈ ಪ್ರವಾಸಕ್ಕೆ ಸೂಕ್ತವಲ್ಲ. ಅಕ್ಟೋಬರಿನಿಂದ ಫೆಬ್ರುವರಿಯ ಅವಧಿ ಮಾತ್ರ ಅತ್ಯಂತ ಸೂಕ್ತವಾದ ಸಮಯ. ಮಲಯತ್ತೂರು ಪೆರುನ್ನಲ್ ನೋಡಲು ಇಚ್ಛಿಸುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಏಪ್ರಿಲ್-ಮೇನಲ್ಲಿ ಯೋಜಿಸಬಹುದು.

ಬೇಸಿಗೆಗಾಲ

ಮಾರ್ಚಿನಿಂದ ಬೇಸಿಗೆಕಾಲವು ಆರಂಭವಾಗಿ ಮೇ ಬಿಸಿಲ ಝಳ ಇರುತ್ತದೆ. ಬೇಸಿಗೆಕಾಲದ ಉಷ್ಣತೆಯನ್ನು ತಡೆದುಕೊಳ್ಳುವುದು ಕಷ್ಟ. ಹಾಗೇ ಈ ಸಂದರ್ಭದಲ್ಲಿ ತಾಪಮಾನವು ಸುಮಾರು 38 ಡಿಗ್ರಿ ತನಕ ಏರುತ್ತದೆ. ಮಲಯತ್ತೂರು ಸಮುದ್ರ ತೀರದಲ್ಲಿರುವುದರಿಂದ ಉಷ್ಣತೆ ಹೆಚ್ಚಿರುತ್ತದೆ. ಈ ಕಾಲದಲ್ಲಿ ಮಲಯತ್ತೂರಿಗೆ ಪ್ರಯಾಣ ಮಾಡುವುದು ಸೂಕ್ತವಲ್ಲ.

ಮಳೆಗಾಲ

ಮಳೆಗಾಲವು ಜೂನ್ನಲ್ಲಿ ಆರಂಭವಾಗಿ ಸಪ್ಟೆಂಬರಿನಲ್ಲಿ ಕೊನೆಗೊಳ್ಳುತ್ತದೆ. ಮಲಯತ್ತೂರಿಗೆ ಅಕ್ಟೋಬರಿನಲ್ಲಿ ಈಶಾನ್ಯ ಮಾನ್ಸೂನ್ ಆಗಮಿಸುತ್ತದೆ. ಮಳೆಗಾಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಇದರಿಂದಾಗಿ ಹೊರಪ್ರದೇಶಗಳನ್ನು ನೋಡುವ ಪ್ರವಾಸಿಗರ ಉತ್ಸಾಹಕ್ಕೆ ಅನಾನುಕೂಲವಾಗಲಿದೆ. ಹೀಗಾಗಿ ಈ ಅವಧಿಯ ಪ್ರವಾಸ ಸೂಕ್ತವಲ್ಲ.

ಚಳಿಗಾಲ

ಡಿಸೆಂಬರಿನಲ್ಲಿ ಚಳಿಗಾಲದ ಆರಂಭವಾಗಿ ಫೆಬ್ರುವರಿಯ ತನಕವೂ ಮುಂದುವರಿಯುತ್ತದೆ. ವರ್ಷದ ಎಲ್ಲಾ ದಿನಗಳಿಗೆ ಹೋಲಿಸಿದರೆ ಈ ಅವಧಿಯಲ್ಲೇ ವಾತಾವರಣ ಪ್ರಶಾಂತವಾಗಿರುತ್ತದೆ. ಚಳಿಗಾಲದಲ್ಲಿ ತಾಪಮಾನವು ಸುಮಾರು 22 ಡಿಗ್ರಿಯಿಂದ 30 ಡಿಗ್ರಿಯ ತನಕ ವ್ಯತ್ಯಾಸವಾಗುತ್ತದೆ. ಮಲಯತ್ತೂರಿಗೆ ಭೇಟಿ ನೀಡಲು ಸೂಕ್ತ ಅವಧಿ ಇದು.