Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಪಾಕ್ಷಿ » ಆಕರ್ಷಣೆಗಳು » ವೀರಭದ್ರ ದೇವಸ್ಥಾನ

ವೀರಭದ್ರ ದೇವಸ್ಥಾನ, ಲೇಪಾಕ್ಷಿ

7

ಲೇಪಾಕ್ಷಿ ಹಳ್ಳಿಯಲ್ಲಿ ವೀರಭದ್ರ ದೇವಾಲಯ ಇದೆ. ಇಲ್ಲಿಗೆ ತಲುಪುವುದು ಅತ್ಯಂತ ಸುಲಭ. ಅನಂತಪುರದಿಂದ ಕೇವಲ 15 ಕಿಮೀ. ದೂರದಲ್ಲಿದೆ. ಈ ದೇವರ ದರ್ಶನಕ್ಕೆ ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ದೇಶಾದ್ಯಂತ ಅನೇಕ ಭಕ್ತರನ್ನು ಈ ದೇವಾಲಯವು ಹೊಂದಿದ್ದು, ವರ್ಷದ ಎಲ್ಲಾ ಕಾಲದಲ್ಲೂ ಭಕ್ತರು ಬರುತ್ತಿರುತ್ತಾರೆ. 16 ನೇ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣ ಆಗಿದೆ. ವಿಜಯನಗರ ಅರಸರ ಆಳ್ವಿಕೆ ಸಂದರ್ಭದಲ್ಲಿ ಇದು ಸ್ಥಾಪಿತವಾಗಿದೆ. ಹೀಗಾಗಿ ದೇವಾಲಯದಲ್ಲಿ ವಿಜಯನಗರ ಅರಸರ ವಾಸ್ತುಶಿಲ್ಪ ಮಾದರಿಯನ್ನೇ ಕಾಣಬಹುದಾಗಿದೆ.

ಈ ದೇವಾಲಯದಲ್ಲಿ ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ ಮಾದರಿಯನ್ನು ಹೆಚ್ಚಾಗಿ ಕಾಣಬಹುದು. ಇವರು ತಮ್ಮ ಕಲಾ ವೈಭವವನ್ನು ಇಲ್ಲಿ ಮೆರೆದಿದ್ದಾರೆನ್ನಬಹುದು. ದೇವಾಲಯದ ಆರಂಭಿಕ ವಿನ್ಯಾಸವನ್ನು ಇವರೇ ಸಿದ್ಧಪಡಿಸಿದ್ದು, ಆಕರ್ಷಕ ಹಾಗೂ ಅಪರೂಪದ ಇವರ ಕಲಾತ್ಮಕತೆಗೆ ಇದೊಂದು ಉದಾಹರಣೆಯಾಗಿ ಗೋಚರಿಸುತ್ತದೆ. ಆಕರ್ಷಕ ಶಿಲ್ಪಕಲೆಗೆ ದೇವಾಲಯ ಹೆಸರುವಾಸಿಯಾಗಿದೆ. ದೇವಾಲಯದಲ್ಲಿ ಒಂದು ಮಂಟಪ ಇದೆ. ದೇವಾಲಯದ ಕಂಬದ ಮೇಲೆ ಸಾಮಾನ್ಯ ಮನುಷ್ಯ ಗಾತ್ರದ ನೃತ್ಯಗಾರ್ತಿ ಹಾಗೂ ಇತರೆ ಸಂಗೀತಗಾರರನ್ನು ಸುಂದರವಾಗಿ ಕೆತ್ತಿಡಲಾಗಿದೆ. ದೇವಾಲಯದ ಆವರಣದಲ್ಲಿ ಬೃಹತ್‌ ನಂದಿ ವಿಗ್ರಹವೊಂದಿದೆ. ಏಕಶಿಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ದೇವಾಲಯ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಹಲವು ಪ್ರವಾಸಿಗರು, ಭಕ್ತರು ವರ್ಷದ ಎಲ್ಲಾ ದಿನದಲ್ಲೂ ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಆಗಮಿಸುವವರ ಸಂಖ್ಯೆ ವೃದ್ಧಿಸುತ್ತಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri