Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಪಾಕ್ಷಿ » ಹವಾಮಾನ

ಲೇಪಾಕ್ಷಿ ಹವಾಮಾನ

ಅಕ್ಟೋಬರ್‌ನಿಂದ ಫೆಬ್ರುವರಿ ನಡುವಿನ ಅವಧಿಯಲ್ಲಿ ಲೇಪಾಕ್ಷಿಗೆ ಬರಬಹುದು. ಈ ಸಂದರ್ಭದಲ್ಲಿ ವಾತಾವರಣ ಅತ್ಯಂತ ಸಹನೀಯವಾಗಿರುತ್ತದೆ. ಹೊರಗೆ ಸುತ್ತಾಡಲು ಉತ್ತಮ ಪರಿಸರ ಈ ಸಮಯದಲ್ಲಿ ಇರುತ್ತದೆ. ಉತ್ತಮ ವಾತಾವರಣ ಇರುವ ಕಾರಣಕ್ಕಾಗಿಯೇ ಹಲವು ಪ್ರವಾಸಿಗರು ದಕ್ಷಿಣ ಭಾರತ ಪ್ರವಾಸವನ್ನು ಚಳಿಗಾಲದಲ್ಲಿ ಇರಿಸಿಕೊಳ್ಳುತ್ತಾರೆ. ಒಂದು ಜಾಕೆಟ್‌ ಅಥವಾ ಶಾಲು ಹಿಡಿದು ಬರುವುದು ಉತ್ತಮ. ಸಂಜೆ ಹಾಗೂ ರಾತ್ರಿ ಕೊಂಚ ಚಳಿ ಇರುತ್ತದೆ. 

ಬೇಸಿಗೆಗಾಲ

ಬೇಸಿಗೆ ಇಲ್ಲಿ ವಿಪರೀತ ಸೆಖೆಯಿಂದ ಕೂಡಿದ್ದಾಗಿರುತ್ತದೆ. ಬಿಸಿ ಹಾಗೂ ತೇವಾಂಶ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ. ಮಧ್ಯಾಹ್ನದ ನಂತರದ ಅವಧಿಯಲ್ಲಿ ಇಲ್ಲಿ ಹೊರಹೋಗುವುದು ಸಹ ಕಷ್ಟಸಾಧ್ಯವಾಗುತ್ತದೆ. ಬೇಸಿಗೆ ಕಾಲದ ಸಾಯಂಕಾಲ ಅತ್ಯಂತ ತ್ರಾಸದಾಯಕವಾಗಿರುತ್ತದೆ. ಬಿಸಿ ಗಾಳಿ ವಿಪರೀತ ಬೀಸುತ್ತಿರುತ್ತದೆ. ಉತ್ತರ ಭಾರತದ ಕಡೆಯ ಬಿಸಿ ಗಾಳಿಯಿಂದಾಗಿ ಲೇಪಾಕ್ಷಿ ಬಿಸಿಯಾಗಿರುತ್ತದೆ. ಮಾರ್ಚ್ ನಲ್ಲಿ ಆರಂಭವಾಗುವ ಬೇಸಿಗೆ ಜೂನ್‌ ಮಧ್ಯದವರೆಗೂ ಇರುತ್ತದೆ.

ಮಳೆಗಾಲ

ಜೂನ್‌ ಮಧ್ಯದಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಮಧ್ಯಮ ಪ್ರಮಾಣದ ಮಳೆಯಾಗುವ ಈ ಪ್ರದೇಶ ಮಳೆಗಾಲವನ್ನು ಅನುಭವಿಸಲು ಹಿತಕರವಾಗಿರುತ್ತದೆ. ತಾಪಮಾನವೂ ಕಡಿಮೆಯಾಗಿ 32 ಡಿಗ್ರಿ ಸೆಲ್ಶಿಯಸ್‌ಗೆ ಕುಸಿಯುತ್ತದೆ. ಲೇಪಾಕ್ಷಿಯ ಮಳೆಯನ್ನು ಅನುಭವಿಸಲಿಕ್ಕಾಗಿಯೇ ಕೆಲ ಪ್ರವಾಸಿಗರು ಈ ಸಂದರ್ಭದಲ್ಲಿ ಬರುತ್ತಾರೆ. ತೇವಾಂಶ ಪ್ರಮಾಣವೂ ಈ ಸಂದರ್ಭದಲ್ಲಿ ಹೆಚ್ಚಾಗುತ್ತದೆ. ಅಕ್ಟೋಬರ್‌ನಲ್ಲಿ ಇಲ್ಲಿ ಹೆಚ್ಚು ಮಳೆ ಆಗುತ್ತದೆ.

ಚಳಿಗಾಲ

ಭಾರತದ ದಕ್ಷಿಣ ಭಾರತದ ಎಲ್ಲಾ ಭಾಗದ ಮಾದರಿಯಲ್ಲೇ ಇಲ್ಲಿಯೂ ಚಳಿಗಾಲ ಇರುತ್ತದೆ. ತಾಪಮಾನವು ಕುಸಿದು 27 ಡಿಗ್ರಿ ಸೆಲ್ಶಿಯಸ್‌ಗೆ ಬರುತ್ತದೆ. ಇಲ್ಲಿನ ವಾತಾವರಣ ವಿಪರೀತ ಚಳಿಯಿಂದ ಕೂಡಿರುವುದಿಲ್ಲ. ಡಿಸೆಂಬರ್‌ನಲ್ಲಿ ಆರಂಭವಾಗುವ ಕಾಲ ಫೆಬ್ರವರಿವರೆಗೂ ಇರುತ್ತದೆ. ಸೆಖೆ ಇರುವುದಿಲ್ಲ. ಆದರೆ ವಾತಾವರಣ ಒಣದಾಗಿರುತ್ತದೆ. ಸಂಜೆ ಹಾಗೂ ರಾತ್ರಿ ಹೊತ್ತು ಕೊಂಚ ಚಳಿ ಇರುತ್ತದೆ.