ಕಿಂಗ್‌ಫಿಶರ್ ಏರ್‌ಲೈನ್ಸ್ ಹಾಗೂ ಏರ್ ಇಂಡಿಯಾ ಲಕ್ಷದ್ವೀಪದ ಅಗತ್ತಿ ದ್ವೀಪದೊಂದಿಗೆ ಸಂಪರ್ಕ ಹೊಂದಿವೆ. ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಕೊಚ್ಚಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಿಂದ ಇಲ್ಲಿನ ಡೊಮೆಸ್ಟಿಕ್ ವಿಮಾನ ನಿಲ್ದಾಣಕ್ಕೆ ವೈಮಾನಿಕ ಸಂಪರ್ಕವಿದೆ. ಆಂತರಿಕ ದ್ವೀಪ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಲಕ್ಷದ್ವೀಪದ ಇನ್ನೊಂದು ದ್ವೀಪವಾದ ಬಂಗಾರಂನಲ್ಲೂ ಒಂದು ಏರೋಡ್ರಂ ಇದೆ. ಪ್ರವಾಸಿಗರ ಅನುಕೂಲಕ್ಕೆ ಇದನ್ನು ಬಳಸಲಾಗುತ್ತದೆ.