ಸುಂದರ್ ಧುಂಗಾ ಗ್ಲೇಸಿಯರ್ ಪಿಂಡಾರ್ ಕಣಿವೆಯ ಪಶ್ಚಿಮ ವಲಯದಲ್ಲಿ ನೆಲೆಗೊಂಡಿದೆ. ಸುಂದರ್ ಧುಂಗಾ ಎಂಬ ಹೆಸರು ಸುಂದರವಾದ ಕಲ್ಲುಗಳಿಂದ ಕೂಡಿದ ಕಣಿವೆ ಎಂಬ ಅರ್ಥವನ್ನು ಸೂಚಿಸುತ್ತದೆ. ಇದು, ಹಿಮ ನದಿಯು ಹೊತ್ತು ತರುವ ಕಲ್ಲು ಬಂಡೆಗಳನ್ನು ಸೂಚಿಸುತ್ತದೆ. ಸುಂದರ್ ಧುಂಗಾದಲ್ಲಿ ಎರಡು ಹಿಮನದಿಗಳು ಇವೆ. ಒಂದು ಮಟ್ಕೋಟಿ ಹಾಗು ಇನ್ನೊಂದು ಸುಖ್ರಾಮ್ ಇವು ಥಾರ್ ಕೋಟ್, ಮೃಗ್ತುನಿ ಮತ್ತು ಪ್ವಾಲಿದ್ವಾರ್ ಗಿರಿಗಳಿಗೆ ಸಮೀಪದಲ್ಲಿ ನೆಲೆಗೊಂಡಿವೆ.
ಬಾಗೇಶ್ವರ್ ಜಿಲ್ಲೆಯು ಸುಂದರ್ ಧುಂಗಾ ಹಿಮನದಿಗೆ ಸಾಗುವ ಚಾರಣಕ್ಕೆ ಮೂಲನೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಹಾದಿಯು ಲೋಹರ್ ಖೇತ್ ಕಡೆ ಸಾಗುತ್ತದೆ. ಲೋಹರ್ ಖೇತ್ ನಿಂದ 11 ಕಿ.ಮೀ ನಡೆದರೆ ಧಾಕುರಿ ತಲುಪಬಹುದು. ಅಲ್ಲಿಂದ 11 ಕಿ.ಮೀ ಸಾಗಿದರೆ ಖಾಟಿ ಹಳ್ಳಿಯನ್ನು ತಲುಪಬಹುದು. ಖಾಟಿಯಿಂದ 8 ಕಿ.ಮೀ ಕ್ರಮಿಸಿದರೆ ಜೈಟೊಲಿಯನ್ನು ತಲುಪಬಹುದು ಮತ್ತು ಅಲ್ಲಿಂದ 22 ಕಿ.ಮೀ ಸಾಗಿದರೆ ಕೊನೆಯದಾಗಿ ಸುಂದರ್ ಧುಂಗಾ ಕಣಿವೆಯನ್ನು ತಲುಪಬಹುದು.


Click it and Unblock the Notifications