ಮಿಲಂ ಗ್ಲೇಸಿಯರ್ ಹಿಮಾಲಯ ಪರ್ವತ ಶ್ರೇಣಿಯ ದಕ್ಷಿಣದ ಇಳಿಜಾರಿನಲ್ಲಿ ನೆಲೆಗೊಂಡಿದೆ. ಈ ಹಿಮನದಿಯು ಸಮುದ್ರ ಮಟ್ಟದಿಂದ 3870 ಮೀಟರ್ ನಿಂದ 5500 ಮೀಟರ್ ಎತ್ತರದವರೆಗೆ ನೆಲೆಗೊಂಡಿದೆ. ಕುಮಾವೂನ್ ಪ್ರಾಂತ್ಯದ ಅತಿ ದೊಡ್ಡ ಹಿಮನದಿ ಎಂಬ ಕೀರ್ತಿಗೆ ಪಾತ್ರವಾಗಿರುವ ಈ ಹಿಮನದಿಯು ಸುಮಾರು 37 ಚ.ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ.
ಇದೆಲ್ಲದರ ಹೊರತಾಗಿ ಮಿಲಂ ಗ್ಲೇಸಿಯರ್ ಕಾಳಿನದಿಯ ಉಪನದಿಯಾದ ಗೋರಿಗಂಗಾ ನದಿಯ ಉಗಮ ಸ್ಥಳವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿಮನದಿಗೆ ಸಾಗುವ ಚಾರಣವು ಜಲಪಾತಗಳು, ಹಳ್ಳಿಗಳು, ಕಾಡುಗಳು ಮತ್ತು ಮರದ ಸೇತುವೆಗಳ ಮೂಲಕ ಹಾದು ಹೋಗುತ್ತದೆ. ಪ್ರವಾಸಿಗರು ಪಿತೋಡಗಢ್ ಜಿಲ್ಲೆಯ ತಾಲ್ಲೂಕಾದ ಮುನ್ಸಿಯಾರಿಯನ್ನು ತಮ್ಮ ಮೂಲ ನೆಲೆಯನ್ನಾಗಿಸಿಕೊಂಡು, ತಮ್ಮ ಆಹಾರ ಹಾಗು ಸರಂಜಾಮುಗಳನ್ನು ಹೊಂದಿಸಿಕೊಂಡು ಚಾರಣವನ್ನು ಕೈಗೊಳ್ಳಬಹುದು.


Click it and Unblock the Notifications