ಮೀಠಾ ರೀಠಾ ಶಾಹಿಬ್ ಒಂದು ಸಿಖ್ಖರ ಧಾರ್ಮಿಕ ಕೇಂದ್ರವಾಗಿದೆ. ಇದನ್ನು 1960 ರಲ್ಲಿ ನಿರ್ಮಿಸಲಾಯಿತು. ದಂತಕಥೆಗಳ ಪ್ರಕಾರ, ಈ ಸ್ಥಳಕ್ಕೆ ಗುರುನಾನಕ್‍ರವರು ಗೋರಕ್‍ಪಂಥಿ ಜೋಗಿಗಳ ಜೊತೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚರ್ಚೆ ನಡೆಸುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದರಂತೆ. ಈ ಸ್ಥಳವು ರಾಟಿಯ ಮತ್ತು ಲೋಧಿಯ ನದಿಗಳ ಸಂಗಮದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಸಪಿಂಡುಸ್ ಎಮರ್ಜಿನಟುಸ್ ಅಥವಾ ಸ್ವೀಟ್ ರೀಠಾ ಎಂದು ಕರೆಯಲ್ಪಡುವ ಮರಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಧೀರ್ ನಾಥ್ ದೇವಾಲಯವು ಮೀಠಾ ರೀಠಾ ಶಾಹಿಬ್‍ಗೆ ಸಮೀಪದಲ್ಲಿ ನೆಲೆಗೊಂಡಿದೆ. ಬೈಸಾಕಿ ಪೂರ್ಣಿಮೆಯ ಅವಧಿಯಲ್ಲಿ ಇಲ್ಲಿ ಒಂದು ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ದೇವಾಲಯಕ್ಕೆ ಧುಂಗಾಘಾಟ್ ಮೂಲಕ ಸಾಗಬಹುದು. ಇದು ಲೋಹಘಾಟ್-ದೇವಿಧುರ ರಸ್ತೆಯಲ್ಲಿ ನೆಲೆಗೊಂಡಿದೆ.


Click it and Unblock the Notifications