Search
  • Follow NativePlanet
Share
ಮುಖಪುಟ » ಸ್ಥಳಗಳು» ಕೂಚಿಪುಡಿ

ಕೂಚಿಪುಡಿ : ಸಂಸ್ಕೃತಿ ಹಾಗೂ ಸಂಪ್ರದಾಯಗಳ ಗ್ರಾಮ

5

ಭಾರತವು ಕಲೆ ಸಂಸ್ಕೃತಿಯ ವಿಚಾರದಲ್ಲಿ ವಿದೇಶಗಳಿಂದಲೂ ಕೂಡಾ ಮನ್ನಣೆಗಳಿಸಿದೆ. ಅದೇಷ್ಟೋ ನೃತ್ಯ ಸಂಗೀತ ಕಲೆಗಳು ನಮ್ಮಲ್ಲಿ ಜೀವಂತವಾಗಿವೆ. ಬೇರೆಯವರಿಗೆ ಮಾದರಿಯಾಗುವ ರೀತಿಯಲ್ಲಿ ನಾವದನ್ನು ಉಳಿಸಿಕೊಂಡು ಬಂದಿದ್ದೇವೆ ಕೂಡ. ಇದಕ್ಕೆ ಸಾಕ್ಷಿ ನೀಡುವಂತಹ ಹಲವಾರು ರಾಜ್ಯಗಳು ಭಾರತದದಲ್ಲಿವೆ!

ಇಂತಹ ಕಲೆ ಸಂಪ್ರದಾಯಗಳನ್ನು ಜೀವಾಳವನ್ನಾಗಿಸಿಕೊಂಡು ಆದರ್ಶವಾಗಿರುವಂತಹ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವೂ ಒಂದು. ಇಂತಹ ರಾಜ್ಯದಲ್ಲಿರುವ ಪುಟ್ಟ ಗ್ರಾಮ ಕೂಚಿಪುಡಿ ತನ್ನ ಸಾಂಸ್ಕೃತಿಕ ಹಿರಿಮೆಯಿಂದಾಗಿ ಹೆಸರುವಾಸಿಯಾಗಿದೆ. ಇಂತಹ ಶಾಸ್ತ್ರೀಯ ಕಲೆಗಳಿಗೆ ಪುರಾವೆಯನ್ನು ಒದಗಿಸುವಂತಹ ಈ ಪುಟ್ಟ ಗ್ರಾಮಕ್ಕೆ ನೀವೊಮ್ಮೆ ಭೇಟಿಕೊಡಲೇ ಬೇಕು. ಏಕೆಂದರೆ ಇಲ್ಲಿನ ಸಿರಿಯನ್ನು ಹೇಳುವುದಕ್ಕಿಂತ ಹೋಗಿ ನೋಡುವುದೇ ಸೂಕ್ತ.

ಕೂಚಿಪುಡಿ ಒಂದು ಸಣ್ಣ ಗ್ರಾಮ. ಇದು ಆಂಧ್ರ ಪ್ರದೇಶದ ದಕ್ಷಿಣ ರಾಜ್ಯದ ಕೃಷ್ಣಾ ಜಿಲ್ಲೆಯಲ್ಲಿರುವ ಮುವ್ವಾ ಮಂಡಲ್ ಅಡಿಯಲ್ಲಿ ಬರುತ್ತದೆ. ಈ ಹಳ್ಳಿಯು ಬಂಗಾಳ ಕೊಲ್ಲಿಯ ಹಾಗೂ ಕೃಷ್ಣಾ ನದಿಯ ಅತ್ಯಂತ ಸಮೀಪದಲ್ಲಿದೆ. ಕೂಚಿಪುಡಿ ಶಾಸ್ತ್ರೀಯ ನೃತ್ಯವು ಈ ಸ್ಥಳದಲ್ಲಿ ರಚನೆಯಾದ್ದರಿಂದ ಈ ಹಳ್ಳಿಗೆ ಕೂಚಿಪುಡಿ ಎಂದು ಕರೆಯಲಾಗುತ್ತದೆ.

ಕೂಚಿಪುಡಿ ಗ್ರಾಮವು ಮುವ್ವ ಮಂಡಲಂ ನಿಂದ 6.4 ಕೀ.ಮಿ ದೂರದಲ್ಲಿದೆ. ಈ ಹಳ್ಳಿಗೆ ಹತ್ತಿರದಲ್ಲಿ ಅಂದರೆ 25.6 ಅಂತರದಲ್ಲಿ ಪ್ರಸಿದ್ಧವಾದ ಮಚಲೀಪಟ್ಟಣವಿದೆ. ಕೂಚಿಪುಡಿ ಹಳ್ಳಿಯಿಂದ ಆಂಧ್ರ ಪ್ರದೇಶದ ರಾಜಧಾನಿ, ಹೈದ್ರಾಬಾದ್ ನಗರ 286 ಕೀ.ಮಿ ದೂರದಲ್ಲಿದೆ.  

ಕೂಚಿಪುಡಿ ಹಳ್ಳಿಗೆ ಹತ್ತಿರದಲ್ಲಿರುವ ಕೆಲವು ಪ್ರವಾಸಿ ಸ್ಥಳಗಳೆಂದರೆ, ವಿಜಯವಾಡಾ, ಕೊಣಸೀಮಾ, ಗುಂಟೂರು ಹಾಗೂ ಅಮರಾವತಿ.  ಈ ಪಟ್ಟಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಶಾಸ್ತ್ರೀಯ ನೃತ್ಯದ ಕೇಂದ್ರವಾಗಿರುವ ಕೂಚಿಪುಡಿ ಗ್ರಾಮಕ್ಕೂ ಬರುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯಿರುವ ಪ್ರವಾಸಿಗರ ದೃಷ್ಟಿಯಲ್ಲಿ ಕೂಚಿಪುಡಿ ಗ್ರಾಮವು ಅತ್ಯಂತ ಪ್ರಸಿದ್ಧವಾಗಿದೆ. ಕೂಚಿಪುಡಿ ಗ್ರಾಮದ ಸುತ್ತಲೂ ಭೇಟಿ ಮಾಡುವಂತಹ ಹಲವಾರು ಪ್ರದೇಶಗಳಿವೆ. ಅವುಗಳಲ್ಲಿ ಉಂಡವಲ್ಲಿ ಗುಹೆಗಳು, ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನ, ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ, ಮೊಗಲರಾಜಪುರಂ ಗುಹೆಗಳು, ಹಾಗೂ ಕನಕ ದುರ್ಗ ದೇವಾಲಯ ಮೊದಲಾದವುಗಳಿಗೂ ಭೇಟಿ ನೀಡಬಹುದು.

ದುರದೃಷ್ಟವಶಾತ್ ಈ ಹಳ್ಳಿಯಲ್ಲಿ ಯಾವುದೇ ರೈಲ್ವೆ ನಿಲ್ದಾಣಗಳಿಲ್ಲ. ಕೂಚಿಪುಡಿ ಗ್ರಾಮಕ್ಕೆ ವಿಜಯವಾಡವು ಅತ್ಯಂತ ಹತ್ತಿರದ ರೈಲ್ವೆ ಹಾಗೂ ವಿಮಾನ ನಿಲ್ದಾಣವಾಗಿದೆ ಆದಾಗ್ಯೂ, ಉತ್ತಮವಾದ ರಸ್ತೆ ಮಾರ್ಗದ ಮೂಲಕ ಕೂಚಿಪುಡಿಯನ್ನು ಸುಲಭವಾಗಿ ತಲುಪಬಹುದು. ವಿಜಯವಾಡಾದ ಮೂಲಕ ಅಥವಾ ಹೈದ್ರಾಬಾದ್ ಮಾರ್ಗವಾಗಿ ಕೂಚಿಪುಡಿಗೆ ಬರಬಹುದು. ಕೂಚಿಪುಡಿ ಉಷ್ಣವಲಯದ ವಾಯುಗುಣವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ವಾತಾವರಣವು ಅಧಿಕ ಶಾಕಯುಕ್ತವಾಗಿದ್ದು, ಚಳಿಗಾಲದಲ್ಲಿ ವಾಯುಗುಣವು ಮಧ್ಯಮ ಚಳಿಯಿಂದ ಕೂಡಿರುತ್ತದೆ. ಅಂತೆಯೇ ಮಳೆಗಾಲದಲ್ಲಿ ಕೂಚಿಪುಡಿ ಗ್ರಾಮದಲ್ಲಿ ಸಮ ಪ್ರಮಾಣದ ಮಳೆಯಾಗುತ್ತದೆ.

ಕೂಚಿಪುಡಿ ಪ್ರಸಿದ್ಧವಾಗಿದೆ

ಕೂಚಿಪುಡಿ ಹವಾಮಾನ

ಉತ್ತಮ ಸಮಯ ಕೂಚಿಪುಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೂಚಿಪುಡಿ

  • ರಸ್ತೆಯ ಮೂಲಕ
    ಕೂಚಿಪುಡಿ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಅಥವಾ ವಿಮಾನ ನಿಲ್ದಾಣಗಳಿಲ್ಲದಿದ್ದರೂ ಸಹ ರಸ್ತೆ ಮಾರ್ಗದಲ್ಲಿ ಅತ್ಯಂತ ಸುಲಭದಲ್ಲಿ ತಲುಪಬಹುದಾಗಿದೆ. ಕೂಚಿಪುಡಿ ಗ್ರಾಮದಿಂದ ಸುತ್ತಲಿನ ಹತ್ತಿರದ ಪಟ್ಟಣಗಳಿಗೆ ತಲುಪಲು ಸರ್ಕಾರಿ ಬಸ್ ಸೇವೆಗಳ ಜೊತೆಗೆ ಖಾಸಗಿ ಬಸ್ ಸೇವೆಗಳೂ ಲಭ್ಯ. ಅಲ್ಲದೇ ಪ್ರವಾಸಿಗರ ಪ್ರಯಾಣವನ್ನು ಉತ್ತಮಗೊಳಿಸುವುದಕ್ಕಾಗಿ ಡಿಲೆಕ್ಸ್ ಹಾಗೂ ವೋಲ್ವೊ ಬಸ್ ಗಳು ಕೂಡಾ ಇವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೂಚಿಪುಡಿ ಗ್ರಾಮದಲ್ಲಿ ರೈಲ್ವೆ ನಿಲ್ದಾಣಗಳ ವ್ಯವಸ್ಥೆ ಇಲ್ಲ. ಆದರೆ ಕೂಚಿಪುಡಿ ಗ್ರಾಮಕ್ಕೆ ಹತ್ತಿರದಲ್ಲಿರುವ ವಿಜಯವಾಡದ ರೈಲ್ಚೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಗಳ ಕೂಚಿಪುಡಿ ಗ್ರಾಮವನ್ನು ಸುಲಭವಾಗಿ ತಲುಪಬಹುದು. ದೇಶದ ಎಲ್ಲಾ ಪ್ರಮುಖ ನಗರಗಳಿಂದ ವಿಜಯವಾಡದ ರೈಲ್ವೆ ನಿಲ್ದಾಣಕ್ಕೆ ರೈಲುಗಳು ಬರುತ್ತವೆ. ರಜಾ ದಿನಗಳಲ್ಲಿ ರೈಲುಗಳು ಪ್ರಯಾಣಿಕರಿಂದ ತುಂಬಿರುವುದರಿಂದ ಪ್ರವಾಸಿಗರು ಮುಂಗಡ ಟಿಕೇಟ್ ನ್ನು ಕಾಯ್ದಿರಿಸುವುದು ಉತ್ತಮ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೂಚಿಪುಡಿ ಗ್ರಾಮದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಹತ್ತಿರದಲ್ಲಿ ವಿಜಯವಾಡದಲ್ಲಿ ವಿಮಾನ ಸೌಲಭ್ಯವಿದೆ. ವಿಜಯವಾಡಾ ನಗರವು ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದ್ದು, ಮುಂಬೈ, ಹೈದ್ರಾಬಾದ್, ದೆಹಲಿ ಹಾಗೂ ಕೋಲ್ಕತ್ತಾಗಳಂತಹ ಪ್ರಮುಖ ನಗರಗಳಿಂದ ಇಲ್ಲಿಗೆ ವಿಮಾನ ಯಾನದ ಸಂಪರ್ಕವಿದೆ. ಕೂಚಿಪುಡಿ ಗ್ರಾಮಕ್ಕೆ ಹೋಗಲು ಇಲ್ಲಿಂದ ಟ್ಯಾಕ್ಸಿಯನ್ನು ಕೊಂಡೊಯ್ಯಬಹುದು. ಅಲ್ಲದೆ ಪ್ರವಾಸಿಗರಿಗೆ ವಿಜಯವಾಡದ ಮುಖ್ಯ ಬಸ್ ನಿಲ್ದಾಣದಿಂದ ಕೂಚಿಪುಡಿ ಗ್ರಾಮಕ್ಕೆ ಬಸ್ ಸೌಕರ್ಯಗಳೂ ಕೂಡಾ ಲಭ್ಯ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat