Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊಕ್ಕರೆ ಬೆಳ್ಳೂರು

ಕೊಕ್ಕರೆ ಬೆಳ್ಳೂರು - ಬೆಳ್ಳಕ್ಕಿಗಳ ನಾಡಿನಲ್ಲೊಂದು ದಿನ

12

ಪಕ್ಷಿಧಾಮಕ್ಕೆ ಭೇಟಿ ನೀಡಿ ಸುಂದರವಾರ ಹಕ್ಕಿಗಳ ಸೌಂದರ್ಯವನ್ನು ವೀಕ್ಷಿಸುವುದೆಂದರೆ ಎಂಥವರಿಗಾದರೂ ಖುಷಿಯೇ ಹೌದು. ಪುಟ್ಟ ದೋಣಿಯಲ್ಲಿ ತೇಲುತ್ತಾ ಸಣ್ಣ ದ್ವೀಪಗಳ ನಡುವೆ ಹಾದು ಹೋಗುವಾಗ ಹಕ್ಕಿಗಳ ಕಲವರ ಕೇಳುತ್ತಾ ಆ ಪ್ರಕೃತಿಯ ಸೌಂದರ್ಯದಲ್ಲಿ ಲೀನವಾಗಿ ಹೋಗುವುದಕ್ಕೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ.

ಆದರೆ ಪಕ್ಷಿಧಾಮ, ಹಕ್ಕಿಗಳು ಸ್ವಚ್ಛಂದವಾಗಿ ಇರಲೆಂದೇ ನಿರ್ಮಿಸಿರುವ ತಾಣ, ಹಾಗಾಗಿ ಇಲ್ಲಿ ದಿನದಲ್ಲಿ ಕೆಲವೇ ಗಂಟೆಗಳ ಕಾಲ ವಿಹರಿಸಿ ಬರಬಹುದು. ಇದಕ್ಕೆ ನಿರ್ದಿಷ್ಟವಾದ ಶುಲ್ಕವೂ ವಿಧಿಸಲಾಗುವುದು. ಬೋನಿನಲ್ಲಿ ಹಕ್ಕಿಗಳನ್ನು ನೋಡುವುಕ್ಕಿಂತ ಅವುಗಳು ಸ್ವಚ್ಛಂದವಾಗಿ ಹಾರಾಡುತ್ತಾ ಹಾಡುವುದನ್ನು ನಿಮ್ಮ ಕುಟುಂಬದವರೊಂದಿಗೆ ನೋಡಲು ಕೇಳಲು ಎಷ್ಟೋ ಆನಂದ ಸಂತೋಷ ಅಲ್ಲವೇ?

ಇಲ್ಲಿ ಅಂಥಾದ್ದೇ ಒಂದು ಸುಂದರವಾದ, ಪ್ರಕೃತಿ ಹಾಗೂ ಮಾನವರ ನಡುವೇಯೇ ಬದುಕುವ ಹಕ್ಕಿಗಳು ದಂಡು ದಂಡಾಗಿ ದೇಶ ವಿದೇಶಗಳಿಂದ ಬಂದು ಜೀವಿಸುತ್ತಿರುವ ಪ್ರಾಕೃತಿಕ ಸ್ಥಳವೊಂದಿದೆ ಅದೇ ಕೊಕ್ಕರೆ ಬೆಳ್ಳೂರು. ಈ ಪ್ರದೇಶವು ಬೆಂಗಳೂರು - ಮೈಸೂರು ನಡುವಿನ ಹೆದ್ದಾರಿಯ ಸಮೀಪದಲ್ಲೇ ಸ್ವಲ್ಪ ಒಳಭಾಗಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಪ್ರಕೃತಿ ಮತ್ತು ಪಕ್ಷಿ ಸಂತಾನ ಒಂದಕ್ಕೊಂದು ಬೆರೆತುಕೊಂಡಿರುವ ವಿಸ್ಮಯವನ್ನು ಇಲ್ಲಿ ಕಾಣಬಹುದು. ಇದು ಬೇರೆ ಪಕ್ಷಿಧಾಮಕ್ಕಿಂತಲೂ ಭಿನ್ನವಾಗಿದೆ, ಹೇಗೆಂದರೆ ಇದು ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಸ್ಥಳವಲ್ಲ ಬದಲಿಗೆ ಇದೊಂದು ಗ್ರಾಮವಾಗಿದ್ದು ಇಲ್ಲಿ ಪೆಲಿಕಾನ್ ಹಾಗೂ ಪೇಂಟೆಡ್ ಸ್ಟ್ರೋಕ್ ಅವುಗಳಂಥ ವಿಶೇಷವಾದ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ನಿರ್ಮಿಸಿಕೊಂಡಿರುವ ಪಕ್ಷಿ ವನವಾಗಿದೆ. ಇಲ್ಲಿನ ಸ್ಥಳಿಯ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು ಅವುಗಳ ರಕ್ಷಣೆ ಮಾಡುತ್ತಿದ್ದಾರೆ ಹಾಗೆಯೇ ಪಕ್ಷಿಗಳೂ ಕೂಡ ಗ್ರಾಮದ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಲ್ಲೇ ಜನಪ್ರಿಯಗೊಳಿಸಿವೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದಾಗಿ ಗ್ರಾಮಕ್ಕೆ ಕನ್ನಡ ಭಾಷೆಯಲ್ಲಿ 'ಕೊಕ್ಕರೆ ಬೆಳ್ಳೂರು' ಎಂಬ ಹೆಸರು ಬಂದಿದೆ.

ತಕ್ಕ ಸಮಯದಲ್ಲಿ ನೀವು ಅಲ್ಲಿದ್ದರೆ ಪಕ್ಷಿಗಳ ದೊಡ್ಡ ದಂಡನ್ನೇ ಕಾಣಬಹುದು!

ನವೆಂಬರ್ ನಿಂದ ಜೂನ್ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡುವುದಾದರೆ ಸುಮಾರು 1,000 ಪೆಲಿಕಾನ್ ಹಾಗೂ 2,500 ಕ್ಕೂ ಹೆಚ್ಚು ಪೈಂಟೆಡ್ ಸ್ಟ್ರೋಕ್ಸ್ ಪಕ್ಷಿಳನ್ನು ಕಾಣಬಹುದು. ಈ ಜಾತಿಗಳಲ್ಲೇ ವಿಭಿನ್ನ ಪ್ರಭೇದಗಳು ಇಲ್ಲಿ ವಾಸವಾಗಿವೆ." ಮನುಷ್ಯ ಹಾಗೂ ಹೆಜ್ಜಾರ್ಲೆ(ಪೆಲಿಕಾನ್)ಗಳ ನಡುವಿನ ಸಂಬಂಧವೇ ಈ ಸ್ಥಳದ ವೈಶಿಷ್ಠ್ಯವಾಗಿದೆ. ಸ್ಥಳೀಯರು ಈ ಹಕ್ಕಿ ತಮ್ಮ ಅದೃಷ್ಟದ ಸಂಕೇತ ಎಂದೇ ಭಾವಿಸುತ್ತಾರೆ ಹಾಗೂ ಅವುಗಳಿಗೆ ಮೀನುಗಳನ್ನು ಹಿಡಿದು ಕೊಡುವುದು, ಗೂಡಿನಿಂದ ಬಿದ್ದು ಗಾಯ ಮಾಡಿಕೊಂಡ ಹಕ್ಕಿಗಳ ಮರಿಗಳನ್ನು ಪೋಷಿಸಿ ಸಲುಹುವುದನ್ನು ಮಾಡುತ್ತಾರೆ," ಎಂದು ಹೆಜ್ಜಾರ್ಲೆ ಬಳಗ ಎಂಬ ಎನ್.ಜಿ.ಓ.ದ ಅಧ್ಯಕ್ಷ ಕೆ.ಮನು ಹೇಳುತ್ತಾರೆ. ಈ ಸ್ಥಳ ಪ್ರವಾಸಿಗರ ತಾಣ ಅಲ್ಲದಿದ್ದರೂ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ ಎಂದು ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ ನ ಕಾರ್ಯದರ್ಶಿಯೂ ಆಗಿರುವ ಅವರು ಹೇಳುತ್ತಾರೆ.

" ನಾನು ಈ ಸ್ಥಳೀಯರೊಂದಿಗೆ ಹಾಗೂ ಇಲ್ಲಿನ ಹೆಜ್ಜಾರ್ಲೆಗಳೊಂದಿಗೆ ಸುಮಾರು 1994 ರಿಂದಲೂ ಸಂಪರ್ಕ ಹೊಂದಿದ್ದು ಸತತವಾಗಿ ಇಲ್ಲಿಗೆ ಬರುವ ಎಲ್ಲಾ ವಿಧವಾದ ಪೆಲಿಕಾನ್ ಹಾಗೂ ಪೈಂಟೆಡ್ ಸ್ಟ್ರೋಕ್ ಪಕ್ಷಿಗಳ ರಕ್ಷಣೆ ಹಾಗೂ ಅವುಗಳ ಸಂತಾನ ಅಭಿವೃದ್ಧಿಗೆ ಶ್ರಮಿಸುತ್ತಲೇ ಇದ್ದೇವೆ," ಎನ್ನುತ್ತಾರೆ. "ಇಂದು ಕೊಕ್ಕರೆ ಬೆಳ್ಳೂರು ಭಾರೀ ಜನಪ್ರಿಯ ಪ್ರವಾಸಿ ತಾಣವಾಗಿದ್ದು ಭಾರತದಲ್ಲಿ ಪೆಲಿಕಾನ್ ಸಂತಾನ ಅಭಿವೃದ್ಧಿ ಮಾಡುವ ಕೆಲವೇ ಸ್ಥಳಗಳಲ್ಲಿ ಇದೂ ಕೂಡ ಒಂದಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ನಮ್ಮ ಕಳಕಳಿಯ ಮನವಿ ಏನೆಂದರೆ ಪ್ರಕೃತಿ ಹಾಗೂ ಪಕ್ಷಿಗಳೊಂದಿಗೆ ಕೆಟ್ಟದ್ದಾಗಿ ವರ್ತಿಸಬೇಡಿ, ಅವುಗಳಿಗೆ ಹೆದರಿಸಬೇಡಿ ತಮಗೂ ತಮ್ಮ ಮರಿಗಳಿಗೂ ಇಲ್ಲಿ ರಕ್ಷಣೆಯುಂಟೆಂಬ ವಿಶ್ವಾಸ ಅವುಗಳಲ್ಲಿ ಗಾಢವಾಗಿದೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಸುತ್ತಿದ್ದೇವೆ ಸಹಕರಿಸಿ ಅಲ್ಲದೆ ಮೊಸಳೆ ಸಂತತಿಯ ಅಭಿವೃದ್ಧಿಯ ಕಡೆಗೂ ಗಮನ ಹರಿಸುಲಾಗುತ್ತಿದೆ," ಎಂದು ತಿಳಿಸಿದರು.

ಪೆಲಿಕಾನ್ ಪಕ್ಷಿ ಅಲ್ಲದೆ, ಇಬ್ಬೀಸ್,ಇಗ್ರೀಟ್ಸ್ ಹಾಗೂ ನೈಟ್ ಹಾರ್ನ್ ಜಾತಿಯ ಪಕ್ಷಿಗಳೂ ಕೂಡ ಕೊಕ್ಕರೆ ಬೆಳ್ಳೂರಿನಲ್ಲಿ ತಮ್ಮ ಸಂತಾನ ಅಭಿವೃದ್ಧಿಗೊಳಿಸುತ್ತವೆ.

ಕೊಕ್ಕರೆ ಬೆಳ್ಳೂರು ಪ್ರಸಿದ್ಧವಾಗಿದೆ

ಕೊಕ್ಕರೆ ಬೆಳ್ಳೂರು ಹವಾಮಾನ

ಉತ್ತಮ ಸಮಯ ಕೊಕ್ಕರೆ ಬೆಳ್ಳೂರು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊಕ್ಕರೆ ಬೆಳ್ಳೂರು

  • ರಸ್ತೆಯ ಮೂಲಕ
    ರಸ್ತೆ ಮಾರ್ಗವಾಗಿ ಕೊಕ್ಕರೆ ಬೆಳ್ಳೂರಿಗೆ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 83 ಕಿ.ಮೀ.ದೂರವಿರುವ ಈ ಸ್ಥಳವನ್ನು ಹೆದ್ದಾರಿಯ ಅಡ್ಡ ರಸ್ತೆ ಮೂಲಕವಾಗಿ ತಲುಪ ಬಹುದಾಗಿದೆ. ಇದಕ್ಕೆ ಸುಲಭವಾಗಲೆಂದು ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿರುವುದರಿಂದ ಸುಲಭವಾಗಿ ಬಂದು ಸೇರಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಕ್ಕರೆ ಬೆಳ್ಳೂರಿಗೆ ಸಮೀಪದಲ್ಲಿರುವ ರೈಲು ನಿಲ್ದಾಣಗಳೆಂದರೆ ಅದು ಮಂಡ್ಯ ಹಾಗೂ ಮದ್ದೂರು ರೈಲು ನಿಲ್ದಾಣಗಳಾಗಿವೆ. ಇವೆರಡೂ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲೇ ನಲೆಸಿವೆ. ಇಲ್ಲಿಂದ ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಕ್ಕರೆ ಬೆಳ್ಳೂರಿಗೆ ತಲುಪಲು ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ಅದು ಬೆಂಗಳೂರು ವಿಮಾನ ನಿಲ್ದಾಣ. ಮೈಸೂರಿನ ವಿಮಾನ ನಿಲ್ದಾಣವೂ ಕೂಡ ಇತ್ತೀಚೆಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಇದೂ ಕೂಡ ಹತ್ತಿರವಾಗಿದೆ. ನಿಲ್ದಾಣಗಳಿಂದ ಅನೇಕ ಬಸ್ ಹಾಗೂ ಟ್ಯಾಕ್ಸಿಗಳೂ ಕೊಕ್ಕರೆ ಬೆಳ್ಳೂರಿಗೆ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri