Search
  • Follow NativePlanet
Share
ಮುಖಪುಟ » ಸ್ಥಳಗಳು » ಖಾಂಡ್ವಾ » ಹವಾಮಾನ

ಖಾಂಡ್ವಾ ಹವಾಮಾನ

ಚಳಿಗಾಲವೇ ಖಾಂಡ್ವಾ ಪಟ್ಟಣಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ. ಹವಾಮಾನ ತಂಪಾಗಿರುತ್ತದೆ. ಹದವಾದ ವಾತಾವರಣ ಇರುವುದರಿಂದ ಪ್ರವಾಸಿ ತಾಣಗಳಿಗೆ ಯಾವುದೇ ತೊಂದರೆಯಿಲ್ಲದೆ ಭೇಟಿ ನೀಡಬಹುದು. ಈ ಸಮಯದಲ್ಲಿ ಹಬ್ಬಹರಿದಿನಗಳ ಆಚರಣೆಗಳು ಕೂಡ ಜಾಸ್ತಿಯಿರುತ್ತವೆ. ದುರ್ಗಾ ಪೂಜೆಯಿಂದ ಶಿವರಾತ್ರಿಯವರೆಗೆ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಋತುವಿನಲ್ಲಿ ಪ್ರವಾಸ ಅನುಕೂಲಕರವಾಗಿರುವುದರಿಂದ ಮುಂಚೆಯೇ ಪ್ರಯಾಣಕ್ಕೆ ಸೀಟುಗಳನ್ನು ಕಾಯ್ದಿರಿಸುವುದು ಉತ್ತಮ.

ಬೇಸಿಗೆಗಾಲ

ಈ ಕಾಲದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುತ್ತದೆ ಮತ್ತು ಒಣ ಹವಾಮಾನವಿರುತ್ತದೆ. ಮಾರ್ಚ್ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶ 42 ಡಿಗ್ರಿ ಸೆಂಟಿಗ್ರೇಡ್ ವರೆಗೆ ಏರಬಹುದು. ಈ ಸಮಯದಲ್ಲಿ ಖಾಂಡ್ವಾ ಪ್ರವಾಸ ಕೈಗೊಂಡರೆ ಡಿಹೈಡ್ರೇಷನ್ ಆಗಿ ದೇಹದಲ್ಲಿ ನೀರಿನಂಶದ ಕೊರತೆ ಕಾಣಬಹುದು. ಸನ್ ಸ್ಟ್ರೋಕ್ ಕೂಡ ಹೊಡೆಯಬಹುದು. ಆದ್ದರಿಂದ ಬೇಸಿಗೆಯಲ್ಲಿ ಖಾಂಡ್ವಾ ಪ್ರವಾಸ ಕೈಗೊಳ್ಳುವುದು ಅಷ್ಟು ಹಿತಕರವಲ್ಲ.

ಮಳೆಗಾಲ

ಮುಂಗಾರು ಶುರು ಆಗುತ್ತಿದ್ದ ಹಾಗೆ ಜೂನ್ ತಿಂಗಳಲ್ಲಿ ಉಷ್ಣಾಂಶ 23 ಡಿಗ್ರಿಗೆ ಇಳಿಯುತ್ತದೆ ಮತ್ತು ಇಲ್ಲಿ ಜಾಸ್ತಿ ಮಳೆ ಸುರಿಯುತ್ತದೆ. ಮಳೆಗಾಲದಲ್ಲಿ ಕೂಡ ಖಾಂಡ್ವಾ ಪ್ರವಾಸ ಸೂಕ್ತವಲ್ಲ. ಏಕೆಂದರೆ, ಮಳೆಯಿಂದಾಗಿ ಪ್ರವಾಸಿ ತಾಣಗಳನ್ನು ಕಾಣಲು ಸಾಧ್ಯವಾಗುವುದಿಲ್ಲ.

ಚಳಿಗಾಲ

ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಚಳಿಗಾಲವಿರುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಹೆಚ್ಚಾಗಿ ಚಳಿಯ ವಾತಾವರಣವಿರುತ್ತದೆ. ಅಂದರೆ, ಉಷ್ಣಾಂಶ 10 ಡಿಗ್ರಿಗೆ ಇಳಿದಿರುತ್ತದೆ. ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಖಾಂಡ್ವಾ ನೋಡಲು ಬಲು ಸುಂದರವಾಗಿರುತ್ತದೆ. ಪ್ರವಾಸಿಗರು ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಉತ್ತಮ.