ಖಮ್ಮಂನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಪಾಪಿ ಕೊಂಡಲು ಆಗಿದೆ. ಇದು ಆಂಧ್ರಪ್ರದೇಶದ ಪರ್ವತ ಪ್ರದೇಶದಲ್ಲಿ ಬರುತ್ತದೆ. ವೀಕ್ಷಕರಿಗೆ ಅಪಾರ ಪ್ರಮಾಣದ ಮುದ ನೀಡುವ ದಕ್ಷಿಣ ಕಣಿವೆ ಪ್ರದೇಶ ಇದಾಗಿದೆ. ನೈಸಗರ್ಗಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಈ ಪ್ರದೇಶವನ್ನು ಕಾಶ್ಮೀರಕ್ಕೆ ಹೋಲಿಸಬಹುದು. ಖಮ್ಮಂನಿಂದ ಈ ಪರ್ವತ ಶ್ರೇಣಿ 124 ಕಿ.ಮೀ. ದೂರದಲ್ಲಿದೆ. ಈ ಭಾಗವು ಇದರ ಜತೆ ಮೇಡಕ್‌ನ ಒಂದು ಭಾಗವೂ ಆಗಿದೆ.
ಮೇಡಕ್ ಪೂರ್ವ ಗೋದಾವರಿ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಈ ಪರ್ವತಗಳ ಸರಣಿಯು ಮೂಲವಾಗಿ ಪಾಪಿ ಕೊಂಡಲು ಎಂದು ಕರೆಸಿಕೊಳ್ಳುತ್ತದೆ. ಇದು ತೆಲುಗು ಶಬ್ಧ. ಇದರ ಅರ್ಥ ವಿಭಾಗ (ಪಾರ್ಟೀಶನ್) ಎಂದಾಗುತ್ತದೆ. ಈ ಅರ್ಥ ಬರಲು ಕಾರಣ ಈ ಪರ್ವತಗಳ ನಡುವೆ ಗೋದಾವರಿ ನದಿ ಹರಿದಿದೆ. ಎರಡನ್ನೂ ಬೇಧಿಸಿಕೊಂಡು ನದಿ ಸಾಗಿದೆ. ಆದರೆ, ಇದಕ್ಕೆ ಕೆಲವರ ನಂಬಿಕೆಯ ಪ್ರಕಾರ ಈ ಪರ್ವತ ಶ್ರೇಣಿಯನ್ನು ದೂರದಿಂದ ನೋಡಿದಾಗ ಹೆಣ್ಣೊಬ್ಬಳು ಜಡೆಯನ್ನು ಮುಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದ ಈ ಹೆಸರು ಬಂದಿದೆ ಎನ್ನಲಾಗುತ್ತದೆ.
ಈ ಪರ್ವತ ಶ್ರೇಣಿಯ ಪಾಪಿ ಕೊಂಡಲು ಅತ್ಯಂತ ಜನಪ್ರಿಯ ತಾಣವಾಗಿರುವುದು ಹಲವು ರೂಪಗಳಿಂದ. ಮುನಿವಾತಂ ಎಂಬಲ್ಲಿ ಒಂದು ಅದ್ಭುತ ಜಲಪಾತ ಸೃಷ್ಟಿಯಾಗಿದೆ. ಇದು ಗುಡ್ಡಗಾಡು ವಾಸಿಗಳ ಪ್ರದೇಶ. ಶಾಂತ ಹಾಗೂ ತೀರ ಪ್ರದೇಶದ ಆಕರ್ಷಣೆ ವಿಶೇಷ ಮುದ ನೀಡುವಂತಿದೆ. ನಿಸರ್ಗ ಸೌಂದರ್ಯ ಸವಿಯುವ ಜತೆಗೆ ಜಲಪಾತವನ್ನು ವೀಕ್ಷಿಸಲು ಜನ ಇಲ್ಲಿಗೆ ಬರುತ್ತಾರೆ. ಗುಡ್ಡಗಾಡು ಜನಾಂಗದವರು ಶಾಂತ ಹಾಗೂ ಶಾಂತತೆಯನ್ನು ಪ್ರದರ್ಶಿಸುವ ಗುಣ ಹೊಂದಿದ್ದಾರೆ. ಪ್ರವಾಸಿಗರಿಗೆ ತೊಂದರೆ ಕೊಡುವ ಕಾರ್ಯ ಇದುವರೆಗೂ ಮಾಡಿಲ್ಲ. ಅತ್ಯಂತ ಶಾಂತಚಿತ್ತರಾಗಿರುತ್ತಾರೆ.


Click it and Unblock the Notifications