ದೇಶದ ಅತ್ಯಂತ ಸುಂದರ ಕೆರೆಗಳಲ್ಲಿ ಇದೂ ಒಂದು. ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿದೆ. ಪಾಲಿಯಾರ್ ಹಳ್ಳಿಯಲ್ಲಿ ಈ ಕೆರೆ ಇದೆ. ಖಮ್ಮಂ ಜಿಲ್ಲೆಯ ಕುಶಮಂಚಿ ಮಂಡಲದಲ್ಲಿ ಈ ಹಳ್ಳಿ ಬರುತ್ತದೆ. ಅಂದರೆ ಖಮ್ಮಂನಿಂದ 30 ಕಿ.ಮೀ. ದೂರ. ರಸ್ತೆ ಮಾರ್ಗದಲ್ಲಿ ಇಲ್ಲಿಗೆ ಆರಾಮವಾಗಿ ತಲುಪಬಹುದು. ಮಾನವ ನಿರ್ಮಿತ ಕೆರೆ ಇದಾಗಿದೆ. ಚಾನೆಲ್ ಮೂಲಕ ನೀರು ಹರಿ ಬಿಡುವ ವ್ಯವಸ್ಥೆ ಇಲ್ಲಿದ್ದು, ಇದೊಂದು ಜಲಾಶಯವಾಗಿ ಬಳಕೆ ಆಗುತ್ತಿದೆ.
ಈ ಚಾನೆಲ್ ಅನ್ನು ಲಾಲ್ ಬಹಾದ್ದೂರ್ ಚಾನೆಲ್ ಎನ್ನಲಾಗುತ್ತದೆ. ಇದನ್ನು ನರಸಿಂಹರಾಜಸಾಗರ ಯೋಜನೆ ಅಡಿ ನಿರ್ಮಿಸಲಾಗಿದೆ. ಕೆರೆಯ ಒಟ್ಟು ವಿಸ್ತೀರ್ಣ 1748 ಹೆಕ್ಟೇರ್. ಒಟ್ಟು 2.5 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ಈ ಜಲಾಶಯದ ನೀರನ್ನು ನೀರಾವರಿಗೆ ಬಳಸಲಾಗುತ್ತದೆ. ಮೀನುಗಾರಿಕೆಗೂ ಈ ಕೆರೆ ಹೆಸರುವಾಸಿಯಾಗಿದೆ.
ಪಾಲಿಯಾರ್ ಕೆರೆ ಅತ್ಯಾಕರ್ಷಕ ಪ್ರವಾಸಿ ತಾಣವಾಗಿ ಖಮ್ಮಂನಲ್ಲಿ ಅಭಿವೃದ್ಧಿ ಹೊಂದಿದೆ. ಜನಾಕರ್ಷಕ ಪ್ರವಾಸಿ ತಾಣವಾಗಿ ಪ್ರಗತಿ ಸಾಧಿಸಿದೆ. ನೀರಿನ ಕ್ರೀಡೆಗಳು ಹಾಗೂ ಸಾಹಸ ಕಾರ್ಯಕ್ಕೆ ಇದು ಉತ್ತಮ ತಾಣ. ಅಲ್ಲದೇ ಈ ಕೆರೆ ಸಾಕಷ್ಟು ವಿಧದ ಸೀಗಡಿ ಹಾಗೂ ಇತರೆ ಸಿಹಿ ನೀರಿನ ಮೀನುಗಳಿಗೆ ಜನಪ್ರಿಯವಾಗಿದೆ. ಕೇವಲ ಬೆಳೆಯಲು ಮಾತ್ರವಲ್ಲ, ಪ್ರವಾಸಿಗರ ಆಹಾರವಾಗಿಯೂ ಸಿಗುತ್ತವೆ.
ಪಾಲಿಯಾರ್ ಕೆರೆಗೆ ಸಮೀಪದಲ್ಲಿಯೇ ವಾಯಾರ್ ಕೆರೆಯೂ ಇದೆ. ಇದು ಕೂಡ ಒಂದು ಉತ್ತಮ ಪಿಕ್‌ನಿಕ್ ತಾಣ. ಖಮ್ಮಂಗೆ ಬರುವ ಪ್ರವಾಸಿಗರು ಎಲ್ಲ ತಾಣವನ್ನು ಒಂದು ಪ್ಯಾಕೇಜ್ ರೂಪದಲ್ಲಿ ಪಡೆದು ಬಂದರೆ ಪ್ರವಾಸಕ್ಕೆ ಇನ್ನಷ್ಟು ಯಶ ಸಿಗುತ್ತದೆ.


Click it and Unblock the Notifications