ಖಮ್ಮಂನಿಂದ ನಾಲ್ಕು ಕಿ.ಮೀ. ದೂರದಲ್ಲಿದೆ ಖಮ್ಮಂ ಲಕ್ಷ್ಮೀ ನರಸಿಂಹ ದೇವಸ್ಥಾನ. ನಗರದ ಹೊರಭಾಗದಲ್ಲಿ ಈ ದೇವಾಲಯವಿದೆ. ರಸ್ತೆ ಮಾರ್ಗದ ಮೂಲಕ ಅತ್ಯಂತ ಸುಲಭವಾಗಿ ಇಲ್ಲಿಗೆ ತಲುಪಬಹುದು. ಗುಡ್ಡದ ಮೇಲೆ ಈ ದೇವಾಲಯ ನಿರ್ಮಾಣಗೊಂಡಿದ್ದು, ಇದರ ಮೇಲೆ ನಿಂತಾಗ ಇಡೀ ಖಮ್ಮಂ ಪಟ್ಟಣದ ಪಾಕ್ಷಿಕ ನೋಟವು ಕಾಣುತ್ತದೆ. ಅದೆ ರೀತಿ ಪಟ್ಟಣದಿಂದ ದೇವಾಲಯ ಗೋಚರಿಸುತ್ತದೆ.
ಖಮ್ಮಂ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದಾಗಿ ಈ ಪ್ರದೇಶಕ್ಕೆ ಸಾಕಷ್ಟು ಘನತೆ ಹೆಚ್ಚಿದೆ. ಸುತ್ತಲಿನ ಅನೇಕ ಮಂದಿ ಈ ಭಾಗಕ್ಕೆ ಭೇಟಿ ನೀಡುವಂತೆಯೂ ಇದು ಮಾಡಿದೆ. ವರ್ಷದ ಎಲ್ಲಾ ದಿನವೂ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ನಿತ್ಯ ನೂರಾರು ಮಂದಿ ಬರುತ್ತಾರೆ. ವಾತಾವರಣದ ಪರಿಸ್ಥಿತಿ ನೋಡಿ ಕೆಲವೊಮ್ಮೆ ಬಾಗಿಲು ಮುಚ್ಚಲಾಗುತ್ತದೆ.
ದೇವಾಲಯವು ನರಸಿಂಹ ಸ್ವಾಮಿಗೆ ಮೀಸಲಾಗಿದೆ. ವಿಷ್ಣುವಿನ ಒಂದು ಅವತಾರ ನರಸಿಂಹ. ಇಲ್ಲಿನ ದೇವಾಲಯದಲ್ಲಿರುವ ವಿಗ್ರಹದಲ್ಲಿ ನರಸಿಂಹ ದೇವರ ಅರ್ಧ ಭಾಗ ಸಿಂಹವಾಗಿಯೂ ಉಳಿದರ್ಧ ಭಾಗ ಮನುಷ್ಯನಂತೆಯೂ ಇದೆ. ಈ ದೇವರು ಮಹಾ ರಕ್ಷಕ ಎಂದು ಭಕ್ತರು ನಂಬಿದ್ದಾರೆ. ಇದೇ ಕಾರಣಕ್ಕೆ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹವನ್ನು ಪಂಚ ನರಸಿಂಹ ಮೂರ್ತಿ ಅಂತಲೂ ಕರೆಯಲಾಗುತ್ತದೆ. ದೇವರ ಇನ್ನೊಂದು ಮೂರ್ತಿ ದೇವಾಲಯದ ಹೊರ ಆವರಣದಲ್ಲಿದೆ. ಇಲ್ಲಿ ಆತ ಯೋಗ ಸ್ಥಿತಿಯಲ್ಲಿದ್ದಾನೆ. ಈ ಮೂಲಕ ಭಕ್ತರನ್ನು ಆತ ಆಶೀರ್ವದಿಸುತ್ತಿದ್ದಾನೆ.


Click it and Unblock the Notifications