Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಳ್ಪೆರುಂಪಳ್ಳಂ » ಹವಾಮಾನ

ಕೀಳ್ಪೆರುಂಪಳ್ಳಂ ಹವಾಮಾನ

ಅಕ್ಟೋಬರ್-ಫೆಬ್ರವರಿವರೆಗಿನ ತಿಂಗಳುಗಳಲ್ಲಿ ಇಲ್ಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚು ಧಗೆಯಾಗಲೀ ಹೆಚ್ಚು ಥಂಡಿಯಾಗಲಿ ಇರುವುದಿಲ್ಲ. ಆದ್ದರಿಂದ ಕೀಳ್ಪೆರುಪಳ್ಳಂಗೆ ಹೋಗಲು ಈ ತಿಂಗಳುಗಳು ಸೂಕ್ತವಾದದ್ದು. ರಾತ್ರಿಗಳಲ್ಲಿ ಚಳಿಯಿರುವ ಸಾಧ್ಯತೆಗಳಿರುವುದರಿಂದ ಉಣ್ಣೆ ಬಟ್ಟೆ ತೆಗೆದುಕೊಂಡು ಹೋಗುವುದು ಉತ್ತಮ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯಲ್ಲಿ ಉಷ್ಣತೆ 32-35 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಮಾರ್ಚ್-ಜೂನ್ ವರೆಗೆ ಇಲ್ಲಿ ಬೇಸಿಗೆ ಕಾಲ. ಮೇ ತಿಂಗಳು ಇಲ್ಲಿ ತೀವ್ರ ಬೇಸಿಗೆ ಕಾಲ. ಈ ಸಮಯದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗ ಬಹುದು ಮತ್ತು ಧಗೆಯಿಂದಾಗಿ ಮೈ ಮೇಲೆ ಗುಳ್ಳೆಗಳಾಗಬಹುದು ಅಥವ ಚರ್ಮ ಸುಡಬಹುದು. ಆದ್ದರಿಂದ ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದು ಸೂಕ್ತವಲ್ಲ.

ಮಳೆಗಾಲ

ಜೂನ್ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಇಲ್ಲಿ ಹೆಚ್ಚಿನ ಮಳೆ ಮತ್ತು ತೀವ್ರ ಗಾಳಿಯಿರುತ್ತದೆ. ಒಮ್ಮೊಮ್ಮೆ ಚಂಡಮಾರುತ ಕೂಡ ಉಂಟಾಗುವುದುಂಟು. ಸೆಪ್ಟೆಂಬರ್- ಅಕ್ಟೋಬರ್ವರೆಗೆ ಮಳೆಗಾಲವಿರುತ್ತದೆ.

ಚಳಿಗಾಲ

ನವಂಬರ್-ಫೆಬ್ರವರಿವರೆಗೆ ಚಳಿಗಾಲ. ಡಿಸಂಬರ್ ಮತ್ತು ಜನವರಿಯಲ್ಲಿ ಇಲ್ಲಿ ಥಂಡಿ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣತೆ ಕನಿಷ್ಠ 20 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ 25 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಹೀಗಾಗಿ ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಹೋಗುವುದು ಉತ್ತಮ.