ಕೀಳ್ಪೆರುಂಪಳ್ಳಂಗೆ ಹತ್ತಿರದಲ್ಲಿ ಯಾವುದೇ ವಿಮಾನನಿಲ್ದಾಣವಿಲ್ಲ. ತಿರುಚ್ಚಿಯ ವಿಮಾನ ನಿಲ್ದಾಣ ಇಲ್ಲಿಂದ 243 ಕಿಮೀ ದೂರದಲ್ಲಿದೆ. ತಿರುಚ್ಚಿಯಲ್ಲಿ ಅಂತರ-ರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ. ಆದರೆ ಇಲ್ಲಿಂದ ಚೆನೈಗೆ ವಿಮಾನ ಸೌಲಭ್ಯವಿದೆ. ಅಲ್ಲಿ ಅಂತರ-ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ತಿರುಚ್ಚಿಯಿಂದ ಟ್ಯಾಕ್ಸಿಯ ಮೂಲಕ ಈ ಹಳ್ಳಿಯನ್ನು ತಲುಪಬಹುದು.