ಕೀಳ್ಪೆರುಂಪಳ್ಳಂನಲ್ಲಿ ಕೇತುವಿನ ದೇವಸ್ಥಾನವಿದೆ. ಇಲ್ಲಿ ಶಿವ ಪಾರ್ವತಿಯರು ಕೂಡ ನಾಗನಾಥಸ್ವಾಮಿ ಮತ್ತು ಸೌಂದರನಾಯಗಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾರೆ. ಅರ್ಧ ಮನುಷ್ಯ ಮತ್ತು ಅರ್ಧ ಹಾವಿನ ರೂಪದ ಕೇತುವಿನ ವಿಗ್ರಹವಿದೆ. ಜಾತಕದಲ್ಲಿ ಕೇತುವಿನ ಸ್ಥಾನಪಲ್ಲಟದಿಂದ ಉಂಟಾಗಿರುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಜನ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ಶಿವನ ಭಕ್ತರಾಗಿದ್ದ ಚೋಳ ವಂಶದ ರಾಜರಿಂದ ಈ ದೇವಸ್ಥಾನವು ಕ್ರಿಶ 12ನೇ ಶತಮಾನದಲ್ಲಿ ಕಟ್ಟಲ್ಪಟ್ಟಿತು ಎಂದು ಹೇಳಲಾಗಿದೆ. ಇಂದು ಇದು ತಮಿಳು ನಾಡಿನ ಮುಖ್ಯ ಯಾತ್ರಾ ಸ್ಥಳಗಳಲ್ಲೊಂದು. ಮಹಾನ್ ಸಾಧುಗಳಾಗಿದ್ದ ಸುಂದರರ್, ಅಪ್ಪಾರ್ ಮತ್ತು ಸಂಬಂದಾರ್ರು ಈ ದೇವಸ್ಥಾನವನ್ನು ಕೊಂಡಾಡಿ ಹಾಡುಗಳನ್ನು ಹಾಡಿದ್ದಾರೆ.
ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ ಕೀಳ್ಪೆರುಪಳ್ಳಂನ ದೇವಸ್ಥಾನದಿಂದ ತಂಜಾವೂರಿನ ಬೃಹದೇಶ್ವರಕ್ಕೆ ಸುರಂಗ ಮಾರ್ಗವಿದೆಯಂತೆ. ಆದರೆ ಹಲವು ಬಾರಿ ಪ್ರಯತ್ನಿಸಿದಾಗಲು ಅಂತಹ ಯಾವುದೇ ಸುರಂಗ ಸುಳಿವು ಕೂಡ ಸಿಕ್ಕಿಲ್ಲ.


Click it and Unblock the Notifications