ಬೇಸಿಗೆ ಸಮಯ ಹಿತಕರವಾಗಿರುವ ಕಾರಣಕ್ಕೆ ಈ ಸಮಯದಲ್ಲಿ ಭೇಟಿ ನೀಡುವುದು ಸೂಕ್ತ.
(ಏಪ್ರಿಲ್-ಜೂನ್): ಏಪ್ರಿಲ್ ನಲ್ಲಿ ಶುರುವಾಗುವ ಬೇಸಿಗೆ ಜೂನ್ ತಿಂಗಳವರೆಗೂ ಮುಂದುವರೆಯುತ್ತದೆ. ಈ ಸಮಯದಲ್ಲಿ 41 ಡಿಗ್ರಿಯಿಂದ 24 ಡಿಗ್ರಿಯವರೆಗೆ ಉಷ್ಣಾಂಶವಿರುತ್ತದೆ. ಈ ಸಮಯವು ಹೊರಾಂಗಣ ಚಟುವಟಿಕೆಗಳನ್ನು ಆಸ್ವಾದಿಸಲು ಉತ್ತಮವಾಗಿರುತ್ತದೆ.
(ಜುಲೈ-ಸೆಪ್ಟೆಂಬರ್): ಸಾಧಾರಣ ಮಳೆಯಾಗುವ ಕಾಲವಿದು. ಕತುವಾ ಜಿಲ್ಲೆಯ ನಗರಕ್ಕಿಂತ ಪರ್ವತ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಜಾಸ್ತಿ.
(ಅಕ್ಟೋಬರ್- ಜನವರಿ): ಚಳಿಗಾಲದಲ್ಲಿ ಕೊರೆಯುವ ಚಳಿಯಿದ್ದು ಉಷ್ಣಾಂಶ 0 ಡಿಗ್ರಿಗೂ ಕುಸಿತ ಕಾಣುತ್ತದೆ ಮತ್ತು 22 ಡಿಗ್ರಿ ಗರಿಷ್ಠ ಉಷ್ಣಾಂಶವಿರುತ್ತದೆ.