ಕಥ್ಗೊಡಮ್ ಭೇಟಿಗೆ ಮಳೆಗಾಲ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ಈ ಪ್ರದೇಶದಲ್ಲಿ ಆರಾಮದಾಯಕ ಹವಾಮಾನವಿರುತ್ತಿದ್ದು ಅದರಲ್ಲೂ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಈ ಸ್ಥಳಕ್ಕೆ ಭೇಟಿನೀಡುವುದು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ.
(ಏಪ್ರಿಲ್-ಜೂನ್): ಏಪ್ರಿಲ್ ತಿಂಗಳಿನಿಂದ ಜೂನ್ ತನಕ ವ್ಯಾಪಿಸಿರುವ ಬೇಸಿಗೆಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 30°C ಮತ್ತು 15°C ಎಂದು ದಾಖಲಿಸಲಾಗಿದ್ದು ಬೇಸಿಗೆಯಲ್ಲಿ ಹವಾಮಾನ ಅಹ್ಲಾದಕರವಾಗಿರುತ್ತದೆ.
(ಜುಲೈ-ಸೆಪ್ಟೆಂಬರ್ ): ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಬರುವ ಮಳೆಗಾಲವು ಈ ಪ್ರದೇಶಕ್ಕೆ ಅತಿ ಮಳೆ ತರುತ್ತಿದ್ದು , ತಂಪಾದ ಹವಾಮಾನವಿರುತ್ತದೆ.
(ಡಿಸೆಂಬರ್-ಫೆಬ್ರವರಿ): ಡಿಸೆಂಬರ್ ನಲ್ಲಿ ಕಾಲಿಡುವ ಚಳಿಗಾಲವು ಫೆಬ್ರವರಿವರೆಗೆ ಇರುತ್ತಿದ್ದು, ಈ ಸಮಯದಲ್ಲಿ, ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳು ಕ್ರಮವಾಗಿ 0°C ಮತ್ತು 24°C ಎಂದು ದಾಖಲಾಗಿದೆ.