ಕಾಲಡಿಗೆ ಮಳೆಗಾಲದ ನಂತರ ಭೇಟಿಕೊಡುವುದು ಉತ್ತಮ. ಸೆಪ್ಟೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಈ ಸಮಯದಲ್ಲಿ ಅತಿಯಾದ ಮಳೆ ಅಥವಾ ಬಿಸಿಲು ನಿಮಗೆ ಸುತ್ತಾಡಲು ತೊಂದರೆ ನೀಡುವುದಿಲ್ಲ.
ಮಾರ್ಚ್ ನಿಂದ ಮೇವರೆಗೆ ಇರುವ ಬೇಸಿಗೆ ಕಾಲವು 37 ಡಿಗ್ರಿಯಷ್ಟು ಸುಡುವ ಬಿಸಿಲಿನ ತಾಪಮಾನವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಕಾಲಡಿಯಲ್ಲಿ ಅಂತಹ ಅಹಿತಕರ ವಾತಾವರಣವಿಲ್ಲದಿರುವುದರಿಂದ ನೀವು ಈ ಕಾಲದಲ್ಲಿ ಕಾಲಡಿಗೆ ಭೇಟಿಕೊಡಬಹುದು.
ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಇಲ್ಲಿ ಅತಿ ಹೆಚ್ಚಾಗಿ ಮಳೆಯಾಗುತ್ತದೆ. ನೀವು ಸಾಹಸಿ ಮನೋಭಾವದವರಾಗಿದ್ದಲ್ಲಿ ಕಾಲಡಿಗೆ ಈ ಸಮಯದಲ್ಲಿ ಭೇಟಿಕೊಡಬಹುದು. ಈ ಕಾಲ ಸಾಹಸಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಇಲ್ಲಿ ಈ ಕಾಲದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದ್ದರು ಸಹ ತಂಪಾದ ವಾತಾವರಣವು ಪ್ರವಾಸಿಗರಿಗೆ ಇಲ್ಲಿ ಸುತ್ತಾಡಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.
ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಹಾಗು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಉಷ್ಣಾಂಶವು ಇಲ್ಲಿಗೆ ಭೇಟಿಕೊಡುವವರಿಗೆ ಆಹ್ಲಾದಕತೆಯನ್ನು ಒದಗಿಸುತ್ತದೆ. ಹಾಗಾಗಿ ಇಲ್ಲಿನ ತಂಪಾದ ವಾತಾವರಣ ಮತ್ತು ಮುದನೀಡುವ ಹವಾಗುಣವು ಕಾಲಡಿಗೆ ಭೇಟಿಕೊಡುವವರಿಗೆ ಹೇಳಿ ಮಾಡಿಸಿದ ಸಮಯವನ್ನಾಗಿಸಿದೆ.