ಸುನಬೆಡ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ (HAL) ಎಂಜಿನ್ ವಿಭಾಗದ ಕಚೇರಿಯ ತವರಾಗಿದೆ. ಜೆಪೋರ್ ನಿಂದ 40 ಕಿ.ಮೀ ದೂರದಲ್ಲಿರುವ ಈ ತಾಣ ಪ್ರಕೃತಿ ಸೌಂದರ್ಯದ ಖನಿಯಾಗಿದೆ. ಇಲ್ಲಿ ವನ್ಯಜೀವಿ ಧಾಮವು ಇದ್ದು ಅಲ್ಲಿ ಹುಲಿ, ಚಿರತೆ, ಬೊಗಳುವ ಜಿಂಕೆ, ಹೈನಾ, ಸ್ಲಾಥ್ ಕರಡಿ, ಸಾಂಬಾರ್, ಮೈನಾ ಹೀಗೆ ಹಲವಾರು ಪ್ರಾಣಿಪಕ್ಷಿಗಳು ಮತ್ತು ಸರಿಸೃಪಗಳನ್ನು ಕಾಣಬಹುದು.
ಸುನಬೆಡ ಹುಲಿರಕ್ಷಣೆ ಯೋಜನೆಯು ಪ್ರಮುಖವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ತರುವಲ್ಲಿ ಪ್ರಯತ್ನಿಸುತ್ತಿದೆ. ಇಲ್ಲಿರುವ ವಿವಿಧ ಬೆಟ್ಟ ಗುಡ್ಡಗಳ ಎತ್ತರಗಳಿಗನುಸಾರವಾಗಿ ಇಲ್ಲಿನ ಕಾಡುಗಳನ್ನು ವಿಂಗಡಿಸಲಾಗಿದೆ. ಒಟ್ಟು ಮೂರು ನದಿಗಳು ಹಾಗು ಹನ್ನೊಂದು ತೊರೆಗಳು ಇಲ್ಲಿ ಹರಿದಿವೆ.
ಒಂದು ಪುರಾತನ ಜಗನ್ನಾಥ ಮಂದಿರವು ಕೂಡ ಇಲ್ಲಿದ್ದು, ಪ್ರತಿ ವರ್ಷ ರಥಯಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ದೇವಾಲಯದಲ್ಲಿ ಶಿವ, ಗಣೇಶ ಹಾಗು ಲಕ್ಷ್ಮಿಯರ ವಿಗ್ರಹಗಳನ್ನೂ ಕಾಣಬಹುದು. ಅಲ್ಲದೆ ಗುಡ್ಡದ ಮೇಲೂ ಸಹ ಶಿವ ದೇವಾಲಯವಿದ್ದು, ಬುಡದಲ್ಲಿ ಪಾರ್ವತಿಯ ದೇವಾಲಯವೂ ಇದೆ. ಪಟ್ಟಣದಲ್ಲೆ ಇದನ್ನು ಅತಿ ಪುರಾತನ ದೇವಾಲಯವೆಂದು ಪರಿಗಣಿಸಲಾಗಿದೆ.


Click it and Unblock the Notifications