ಜೆಪೋರಿನಿಂದ 22 ಕಿ.ಮೀ ದೂರದಲ್ಲಿರುವ ಕೊರಾಪುಟ್ ಒಡಿಶಾದ ಒಂದು ಪ್ರಮುಖ ಪಟ್ಟಣ. ದಟ್ಟ ಹಸಿರಿನ ಕಾಡಿನಲ್ಲಿ ನೆಲೆಸಿರುವ ಈ ಪಟ್ಟಣ ತನ್ನ ಅಸಾಧಾರಣ ಪ್ರಕೃತಿ ಸೌಂದರ್ಯ, ಬುಡಕಟ್ಟು ಜೀವನ ಮತ್ತು ವನ್ಯಜೀವಿ ಸಂಪತ್ತಿನಿಂದ ಕಂಗೊಳಿಸುತ್ತದೆ.
ಇಲ್ಲಿನ ಬುಡಕಟ್ಟು ಜನರನ್ನು ಆದಿವಾಸಿ ಅಥವಾ ಮೂಲಜನರು ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುತ ಕೈಗಾರೀಕರಣದಿಂದಾಗಿ ಈ ಜನರು ಹೊಸ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಜಗನ್ನಾಥನಿಗೆ ಸಮರ್ಪಿತವಾದ ಒಂದು ಪುರಾತನ ಹಾಗು ಪ್ರಸಿದ್ಧ ದೇವಾಲಯ ಇಲ್ಲಿದೆ.
ಈ ದೇವಾಲಯದ ವಿಶೇಷತೆಯೆಂದರೆ ಜಾತಿ ಮತ ಭೇದವಿಲ್ಲದೆ ಎಲ್ಲ ಜನರು ಇದರಲ್ಲಿ ಪ್ರವೇಶಿಸಬಹುದು. ಪ್ರತಿ ವರ್ಷವೂ ಸಾವಿರಾರು ಭಕ್ತಾದಿಗಳು ಭಗವಂತನ ಕೃಪೆ ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಕೆಲವು ಪ್ರಮುಖ ನದಿಗಳಾದ ಮಚಕುಂಡ, ಕೊಳಬ ಮತ್ತು ಬನ್ಸಿಧರ ಇಲ್ಲಿ ಹರಿದಿದ್ದು, ಕೊನೆಗೆ ಕೊರಾಪುಟ್ ಮೂಲಕ ಸಮುದ್ರದಲ್ಲಿ ಲೀನವಾಗುತ್ತವೆ.


Click it and Unblock the Notifications