ದಿಯೋಮಲಿ ಸಮುದ್ರ ಮಟ್ಟಕ್ಕಿಂತ 1672 ಮೀಟರ್ ಎತ್ತರದಲ್ಲಿದ್ದು, ಒರಿಸ್ಸಾ ಹಾಗೂ ಇಡೀ ಪೂರ್ವ ಘಟ್ಟದಲ್ಲಿನ ಎತ್ತರದ ಶೃಂಗ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಜೆಪೋರ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.
ಕಲಕಲನೆ ಹರಿಯುತ್ತಿರುವ ಝರಿ, ಆಳವಾದ ಕಣಿವೆಗಳು, ದಟ್ಟ ಅರಣ್ಯ ಹಾಗೂ ನಡುವೆ ಬರುವ ಹುಲ್ಲುಗಾವಲುಗಳು ಈ ಸ್ಥಳವನ್ನು ಮತ್ತಷ್ಟು ಚೆಂದಗೊಳಿಸುವುತ್ತವೆ. ಈ ಸ್ಥಳವು ವನ್ಯ ಜೀವಿ ಹಾಗೂ ಸಸ್ಯರಾಶಿಗಳ ಆಗರವಾಗಿದೆ. ದಿಯೋಮಲಿ ಭುನಿಯ, ಬ್ಹೊತ್ರ, ಪರಾಜ ಹಾಗೂ ಮಾಲಿ ಬುಡಕಟ್ಟು ಜನಾಂಗದವರ ತವರೂ ಆಗಿದೆ. ಸಾಹಸಪ್ರಿಯರು ಹ್ಯಾಂಗ್ ಗ್ಲೈಡಿಂಗ್, ಟ್ರೆಕಿಂಗ್, ಪರ್ವತಾರೋಹಣ ಮುಂತಾದ ಸಾಹಸ ಕ್ರೀಡೆಗಳನ್ನಾಡಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಸುರಂಗ ಮಾರ್ಗದ ಮೂಲಕ ದಿಯೋಮಲಿ ದಾಟುವ ರೈಲಿನಲ್ಲಿ ಪಯಣಿಸುವುದೇ ಒಂದು ಅದ್ಭುತ ಅನುಭವ. ಎತ್ತರದ ಗುಡ್ಡಗಳು, ಕಣಿವೆಗಳು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ರೈಲು ಪ್ರಯಾಣ ಮನ ಸೋರೆಗೊಳ್ಳುವುದಲ್ಲದೆ, ಇದನ್ನು ಒಮ್ಮೆಯಾದರೂ ಅನುಭವಿಸಲೇ ಬೇಕು.
ರಸ್ತೆ ಮೂಲಕ ಪಯಣವೂ ರೋಮಾಂಚಕಾರಿ ಹಾಗೂ ಸಾಹಸಿಗವಾಗಿದ್ದು, ಮಾರ್ಗದುದ್ದಕ್ಕೂ ಅಪಾಯಕಾರಿ ತಿರುವುಗಳಿದ್ದು, ರಸ್ತೆ ವರ್ತುಲಾಕಾರವಾಗಿ ಬೆಟ್ಟದಿಂದ ಕೆಳಗಿಳಿಯುವಂಥಹ ಅನುಭವವಾಗುತ್ತದೆ. ಜೆಪೋರ್ ಗೆ ಭೇಟಿ ನೀಡುವ ಯಾತ್ರಿಗಳು ಈ ಸ್ಥಳಕ್ಕೆ ಭೇಟಿ ನೀಡಲೇ ಬೇಕು.


Click it and Unblock the Notifications