ಜಮ್ಮು ವಿಮಾನ ನಿಲ್ದಾಣ ಜಮ್ಮುವಿಗೆ ಹತ್ತಿರದ ದೇಶೀಯ ವಾಯುನೆಲೆಯಾಗಿದೆ. ಇದು ಭಾರತದ ಇತರ ನಗರಗಳಾದ ದೆಹಲಿ, ಬೆಂಗಳೂರು ಮತ್ತು ಅನೇಕ ಇತರೆ ಪ್ರಮುಖ ಮೆಟ್ರೋಪಾಲಿಟನ್ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಮ್ಮುವಿಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ದೆಹಲಿ ವಿಮಾನಗಳು ವಿದೇಶಗಳ ಜೊತೆಗೆ ಭಾರತದ ಇತರ ರಾಜ್ಯಗಳಿಗೂ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ.