ಪ್ರವಾಸಿಗರು ಜಾಗೇಶ್ವರಕ್ಕೆ ಹೋಗಲು ಬಯಸುವುದಾದರೆ, ಅವರು ಈ ಸ್ಥಳಕ್ಕೆ ಬೇಸಿಗೆಯ ಕಾಲದಲ್ಲಿ ಹೋಗಬಹುದು.
(ಏಪ್ರಿಲ್‍ನಿಂದ ಜೂನ್) : ಬೇಸಿಗೆಯು ಈ ಪ್ರಾಂತ್ಯದಲ್ಲಿ ಏಪ್ರಿಲ್‍ನಲ್ಲಿ ಆರಂಭಗೊಂಡು ಜೂನ್‍ನಲ್ಲಿ ಅಂತ್ಯಗೊಳ್ಳುತ್ತದೆ. ಈ ಕಾಲದಲ್ಲಿ ಜಾಗೇಶ್ವರದಲ್ಲಿ ಉಷ್ಣಾಂಶವು ಗರಿಷ್ಠ 30° ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 15° ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
(ಜುಲೈನಿಂದ ಸೆಪ್ಟೆಂಬರ್): ಈ ಪ್ರಾಂತ್ಯದಲ್ಲಿ ಜುಲೈನಲ್ಲಿ ಮಳೆಗಾಲವು ಪ್ರಾರಂಭಗೊಳ್ಳುತ್ತದೆ. ಸಮ ಪ್ರಮಾಣದ ಮಳೆಯು ಈ ಸ್ಥಳಕ್ಕೆ ಹಸಿರಿನ ಹೊದಿಕೆಯನ್ನು ಹಾಸುವಂತೆ ಮಾಡುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ತಂಪಾಗಿ ಮತ್ತು ಆಹ್ಲಾದಕರವಾಗಿ ಇರುತ್ತದೆ.
(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲವು ಜಾಗೇಶ್ವರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 4° ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 15° ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.