Search
  • Follow NativePlanet
Share
ಮುಖಪುಟ » ಸ್ಥಳಗಳು » ಇಸ್ಲಾಂನಗರ » ಹವಾಮಾನ

ಇಸ್ಲಾಂನಗರ ಹವಾಮಾನ

ನವೆಂಬರ್ ಮತ್ತು ಫೆಬ್ರವರಿ ಮಧ್ಯೆ ಇಸ್ಲಾಂನಗರಕ್ಕೆ ಬೇಟಿನೀಡಲು ಅತ್ಯುತ್ತಮಕಾಲ.  ಹಿತವಾದ ಚಳಿಗಾಲದ ಸಮಯದಲ್ಲಿ ಪ್ರಾಚೀನ ನಗರವಾದ ಇಸ್ಲಾಂನಗರಕ್ಕೆ ಬೇಟಿನೀಡುವುದು ಅತ್ಯುತ್ತಮ.  ಆ ಸಮಯದಲ್ಲಿ ಸೂರ್ಯನ ತೀಕ್ಷ್ಣಕಿರಣಗಳಿಂದ ಬೆನ್ನುಸುಡುವುದರ ಬಗ್ಗೆ ಚಿಂತೆಮಾಡಬೇಕಿಲ್ಲ. ಅದಲ್ಲದೆ ಈ ಸಮಯದಲ್ಲಿ ಮಳೆಯಿಲ್ಲದಿರುವುದರಿಂದ ನಿಮ್ಮ ರಜಾದಿನಗಳಿಗೆ ಅಡ್ಡಿಯಾಗುವುದಿಲ್ಲ.  ಆದ್ದರಿಂದ ಇಸ್ಲಾಂನಗರಕ್ಕೆ ಬೇಟಿ ನೀಡಲು ಹಿತಕರವಾದ ಚಳಿಗಾಲ ಅತ್ಯುತ್ತಮ ಸಮಯ.

ಬೇಸಿಗೆಗಾಲ

ಇಸ್ಲಾಂನಗರದಲ್ಲಿ ಬೇಸಿಗೆಗಾಲದಲ್ಲಿ ಸುಡುವ ಬಿಸಿಲಿದ್ದು ತಾಪಮಾನವು 35 ರಿಂದ 40 ಡಿಗ್ರಿ ಸೆಲ್ಸಿಯುಸ್ ಇರುತ್ತದೆ. ಬೇಸಿಗೆಯು ಮಾರ್ಚ್‍ನಲ್ಲಿ ಆರಂಭವಾಗಿ ಮೇ ತಿಂಗಳಿನಲ್ಲಿ ತಾಪಮಾನವು ಅತ್ಯುಚ್ಚವಾಗಿರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಅಷ್ಟೊಂದು ಔಚಿತ್ಯವಲ್ಲ. 

ಮಳೆಗಾಲ

ಜೂನ್ ತಿಂಗಳಲ್ಲಿ ಮಳೆಗಾಲವು ಕಡಿಮೆ ಮಳೆಯಿಂದ ಆರಂಭವಾಗಿ ತಿಂಗಳ ಕೊನೆಯಲ್ಲಿ ಚೆನ್ನಾಗಿ ಬರುತ್ತದೆ. ಮಳೆಗಾಲವು ಸೆಪ್ಟೆಂಬರ್ ವರೆಗೆ ಇರುತ್ತದೆ. ಆಗಾಗ್ಗೆ ಬರುವ ಮಳೆಯು ಸುಡುವ ಬಿಸಿಲಿನಿಂದ ಪರಿಹಾರ ತರುತ್ತದೆ.  ಭಾರೀ ಮಳೆಯು ಜೂನ್ ಮತ್ತು ಸೆಪ್ಟೆಂಬರ್ ಮಧ್ಯೆ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಪ್ರಮಾಣದ ಮಳೆಯು ಡಿಸೆಂಬರ್ ಮತ್ತು ಜನವರಿಯಲ್ಲೂ ಬೀಳುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ.  ಚಳಿಗಾಲ ನವೆಂಬರ್ ನಲ್ಲಿ ಆರಂಭವಾಗಿ ಫೆಬ್ರವರಿವರೆಗೆ ಇರುತ್ತದೆ. ತಾಪಮಾನವು ಡಿಸೆಂಬರ್ ಮತ್ತು ಜನವರಿಯಲ್ಲಿ ತೀವ್ರವಾಗಿ ಇಳಿಯುತ್ತದೆ. ಚಳಿಗಾಲದಲ್ಲಿ ಸರಾಸರಿ ತಾಪಮಾನವು 10 ರಿಂದ 27 ಡಿಗ್ರಿ ಸೆಲ್ಸಿಯುಸ್ ಇರುತ್ತದೆ.  ಚಳಿಗಾಲದಲ್ಲಿ ಇಸ್ಲಾಂನಗರಕ್ಕೆ ಭೇಟಿಯ ಯೋಜನೆ ಮಾಡುವುದು ಒಳ್ಳೆಯ ಯೋಚನೆ.