ಇದೊಂದು ಪವಿತ್ರವಾದ ಕೆರೆಯಾಗಿದ್ದು, ವರ್ಷದ ಎಂಟು ತಿಂಗಳುಗಳು ಕಾಲ ಇಲ್ಲಿನ ನೀರು ಹಿಮವಾಗಿರುತ್ತದೆ. ಈ ಸರೋವರ ಗುರುದ್ವಾರದ ಸಮೀಪದಲ್ಲೆ ಇದ್ದು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದೆ. ಇಲ್ಲಿನ ಸ್ಥಳೀಯ ಜನರ ಪ್ರಕಾರ, ಸಿಖ್ಖರ ಹತ್ತನೆಯ ಗುರುವಾದ ಗುರು ಗೋವಿಂದ ಸಿಂಗ್ ಇದರ ದಡದಲ್ಲೆ ಕುಳಿತು ಧ್ಯಾನ ಮಾಡಿದ್ದರು. ಇದರ ಜೊತೆಗೆ ಮೇಧಸ ರವರಂತಹ ಇನ್ನಿತರ ಸಂತರು ಇಲ್ಲೆ ಕುಳಿತು ತಪಸ್ಸನ್ನಾಚರಿಸಿದ್ದರು.


Click it and Unblock the Notifications